ಶೆಫ್‌ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಲೇಡಿ ಸೂಪರ್‌ ಸ್ಟಾರ್ ಅನುಷ್ಕಾ ಶೆಟ್ಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲೇಡಿ ಓರಿಯೆಂಟೆಡ್ ಸಿನಿಮಾಗಳಿಗೆ ಆದ್ಯತೆ ನೀಡುವ ಅನುಷ್ಕಾ ಇತರ ನಾಯಕರ ಎದುರು ನಾಯಕಿಯಾಗಿ ನಟಿಸುವ ಸಿನಿಮಾಗಳನ್ನು ಹೆಚ್ಚಾಗಿ ಬದಿಗಿಟ್ಟಿದ್ದರು. ಇದೀಗ ಪುನಃ ಅನುಷ್ಕಾ ಹೀರೋಗಳ ಎದುರು ಸಿನಿಮಾಗಳಲ್ಲಿ ನಟಿಸಲು ರೆಡಿಯಾಗಿದ್ದು, ಜಾತಿ ರತ್ನಾಲು ಖ್ಯಾತಿಯ ನಾಯಕ ನವೀನ್ ಪೋಲಿಶೆಟ್ಟಿ ಅಭಿನಯದ ಚಿತ್ರದಲ್ಲಿ ಅನುಷ್ಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ಈ ಸಿನಿಮಾ ಘೋಷಣೆಯಾದಾಗಿನಿಂದಲೂ ಈ ಸಿನಿಮಾದಲ್ಲಿ ಅನುಷ್ಕಾ ಪಾತ್ರ ಹೇಗಿದೆ ಮತ್ತು ಚಿತ್ರದಲ್ಲಿ ಅವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಸ್ವೀಟಿ ಅಭಿಮಾನಿಗಳಲ್ಲಿ ಮೂಡಿತ್ತು. ಇಂದು ಅನುಷ್ಕಾ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್ ನೋಡಿದರೆ ಅನುಷ್ಕಾ ಈ ಸಿನಿಮಾದಲ್ಲಿ ಬಾಣಸಿಗ ಪಾತ್ರದಲ್ಲಿ ನಟಿಸುತ್ತಿರುವುದು ಸ್ಪಷ್ಟವಾಗಿದೆ. ಈ ಚಿತ್ರದಲ್ಲಿ ಅವರ ಹೆಸರು ‘ಅನ್ವಿತಾ ರವಳಿ ಶೆಟ್ಟಿ’ ಎಂದು ಚಿತ್ರತಂಡ ಬಹಿರಂಗಪಡಿಸಿದೆ.

ಈ ಚಿತ್ರವನ್ನು ಪಿ. ಮಹೇಶ್ ನಿರ್ದೇಶಿಸಿದ್ದಾರೆ ಮತ್ತು ಯುವಿ ಕ್ರಿಯೇಷನ್ಸ್ ಬ್ಯಾನರ್ ನಿರ್ಮಿಸಿದೆ. ಈ ಚಿತ್ರದಲ್ಲಿ ಹಲವು ಖ್ಯಾತ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲೇ ಈ ಚಿತ್ರದ ಬಗ್ಗೆ ಹೊಸ ಅಪ್ಟೇಡ್‌ ನೀಡಲು ಚಿತ್ರತಂಡ ಸಿದ್ಧವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!