ದೇಶ ವಿರೋಧಿ ಯಾವುದೇ ಸಂಘಟನೆಗಳಿರಲಿ ಬ್ಯಾನ್ ಮಾಡಬೇಕು: ಎಂ.ಬಿ.ಪಾಟೀಲ್

ಹೊಸದಿಗಂತ ವರದಿ, ಬಳ್ಳಾರಿ:

ದೇಶ ವಿರೋಧಿ ಯಾವುದೇ ಸಂಘಟನೆಗಳಿರಲಿ ಅವುಗಳನ್ನು ಬ್ಯಾನ್ ಮಾಡಬೇಕು ಎನ್ನುವುದು ನಮ್ಮದೂ ಒತ್ತಾಯವಿದೆ ಎಂದು  ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದರು. ಜನರ ಭಾವನೆಗಳನ್ನು ಯಾರು ಕೆರಳಿಸುತ್ತಾರೋ, ಜನರ ಮನಸ್ಸನ್ನು ಒಡೆಯಲು ಯತ್ನಿಸುವ ಯಾವುದೇ ಸಂಘಟನೆಗಳಿರಲಿ ಅವುಗಳನ್ನು   ನಿಷೇಧಿಸಬೇಕು ಎಂಬುದು ನಮ್ಮದೂ ಒತ್ತಾಯವಿದೆ ಎಂದರು.

ಯುವ ನೇತಾರ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ  ಭಾರತ್ ಜೋಡೋ 3580 ಕಿ.ಮೀ. ಈ ಐತಿಹಾಸಿಕ ಪಾದಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನಡೆಯಲಿದೆ. ಈ ಮೂಲಕ ಒಡೆದ ಮನಸ್ಸನ್ನು ಒಗ್ಗೂಡಿಸುವುದು, ಬೆಲೆ ಏರಿಕೆ, ಉದ್ಯೋಗ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಗಮನಸೆಳೆದು ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ. ದಾರಿಯುದ್ದಕ್ಕೂ ಈ ಪಾದಯಾತ್ರೆಯಲ್ಲಿ ಯುವಕರು, ಮಹಿಳೆಯರು, ನಾನಾ ಸಂಘಟನೆ ಪದಾಧಿಕಾರಿಗಳು ಭಾಗವಹಿಸುದ್ದಾರೆ. ಸೆ.30ರಂದು ಗುಂಡ್ಲುಪೇಟೆ ಮೂಲಕ ರಾಜ್ಯಕ್ಕೆ ಪಾದಯಾತ್ರೆ ಆಗಮಿಸಲಿದೆ, ಅದ್ದೂರಿ ಸ್ವಾಗತಿಸಲು ಎಲ್ಲ ಸಿದ್ದತೆಗಳು ನಡೆದಿವೆ, 24  ದಿನಗಳ ಕಾಲ ರಾಜ್ಯದಲ್ಲಿ ಪಾದಯಾತ್ರೆ ನಡೆಯಲಿದ್ದು, ಗುಂಡ್ಲುಪೇಟೆ ಮೂಲಕ ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಮೂಲಕ ಆಂದ್ರಕ್ಕೆ ತೆರಳಲಿದೆ. ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಸಂಸದರನ್ನಾಗಿ ಚುನಾಯಿಸಿ ಕಳಿಸಿದ ಜಿಲ್ಲೆ ಬಳ್ಳಾರಿ ಆಗಿದ್ದು, ಈ ಹಿನ್ನೆಲೆ ಬಳ್ಳಾರಿಯಲ್ಲೇ ಅ.19ರಂದು ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಎಐಸಿಸಿ ಚುನಾವಣೆ ಅ.17 ರಂದು ನಡೆಯುತ್ತಿರುವ ಹಿನ್ನೆಲೆ ಅ.19ರ ಬದಲಾಗಿ ಅ.15ಕ್ಕೆ ನಡೆಯುವ ಸಾಧ್ಯತೆಯಿದೆ. ಈ ಕುರಿತು ಅಧಿಕೃತವಾಗಿ ಪ್ರಕಟಿಸಲಾಗುವುದು. ಈ ಸಮಾವೇಶದ ಪೂರ್ವ ತಯಾರಿ, ಸಿದ್ದತೆ ಕುರಿತು ಪ್ರಮುಖರ ಸಭೆ ನಡೆಸಲಾಗಿದ್ದು, ಕಾರ್ಯಕ್ರಮದ ರೂಪರೇಶಗಳ ಬಗ್ಗೆ ಚೆರ್ಚಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸುಮಾರು 5ಲಕ್ಷ ಜನರನ್ನು ಸೇರಿಸುವ ಚಿಂತನೆಯಿದೆ ಎಂದರು.
ಒಡೆದ ಮನಸ್ಸುಗಳನ್ನು ಒಗ್ಗೂಡಿಸುವುದು, ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆಗಳೇ ಈ ಪಾದಯಾತ್ರೆಯ ಮುಖ್ಯ ಅಜಂಡಾವಾಗಿವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎಮ್ಮೆಲ್ಸಿ ಅಲ್ಲಂ ವೀರಭದ್ರಪ್ಪ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಜಿ.ಪಂ.ಮಾಜಿ ಸದಸ್ಯ ನಾರಾ ಭರತ್ ರೆಡ್ಡಿ, ಪಾಲಿಕೆ ಮೇಯರ್ ರಾಜೇಶ್ವರಿ ಸುಬ್ಬರಾಯಡು, ವಹಾಬ್, ಮಾಜಿ ಶಾಸಕ ಚಂದ್ರಶೆಖರಯ್ಯ ಸ್ವಾಮೀ, ಜೆ.ಎಸ್.ಆಂಜಿನೇಯಲು, ಯುವ ಮುಖಂಡ ಮುರುಳೀಕೃಷ್ಣ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!