ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಟಮಿನ್ ಸಿ, ಫೈಬರ್‌ನ ಉತ್ತಮ ಮೂಲವಾದ ಸ್ಟಾರ್ ಫ್ರೂಟ್ ರಕ್ತಹೀನತೆ ತಡೆಗಟ್ಟುವಲ್ಲಿಯೂ ಸಹಾಯ ಮಾಡುತ್ತದೆ. ಜೊತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಸಹ ಕ್ರಮವಾಗಿ ಇಡುತ್ತದೆ. ಆಯುರ್ವೇದ ವೈದ್ಯಕೀಯದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.
ಸ್ಟಾರ್ ಫ್ರೂಟ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ಶೀತ ಮತ್ತು ಜ್ವರ ಕಾಲದಲ್ಲಿ ಇದನ್ನು ತೆಗೆದುಕೊಳ್ಳುವುದು ಲೇಸು. ಇದು ಚರ್ಮ, ಕೂದಲು ಮತ್ತು ಉಗುರುಗಳನ್ನು ಆರೋಗ್ಯಕರ ಮತ್ತು ಬಲವಾಗಿರಿಸುವ ಪ್ರೋಟೀನ್. ನಿಯಮಿತವಾಗಿ ಈ ಹಣ್ಣನ್ನು ಸೇವಿಸಿಉವದರಿಂದ ನಿನ್ಮ ತ್ವಚೆ ದೀರ್ಘಕಾಲದವರೆಗೆ ಯೌವನವಾಗಿ ಕಂಗೊಳಿಸುತ್ತಿರುತ್ತದೆ. ಸೋಂಕುಗಳ ವಿರುದ್ಧವೂ ಹೋರಾಡುತ್ತದೆ.
ಮಹಿಳೆಯರು ದಿನಕ್ಕೆ 25 ಗ್ರಾಂ ಫೈಬರ್ ತಿನ್ನಬೇಕು. ಆ ಗುರಿ ಸಾಧಿಸಲು ಈ ಹಣ್ಣು ಸಹಾಯ ಮಾಡುತ್ತದೆ. ಕಡಿಮೆ ಸಕ್ಕರೆ ತಿನ್ನುವವರಿಗೆ ಸ್ಟಾರ್ಟ್ ಫ್ರೂಟ್ ಒಳ್ಳೆಯದು.