ಭಾರತೀಯರಲ್ಲಿ ಕ್ಷಮೆಯಾಚಿಸುವೆ: ಪಾಕಿಸ್ತಾನದ ನಿರೂಪಕಿ ಜೈನಾಬ್‌ ಅಬ್ಬಾಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್‌ ಟೂರ್ನಿ ನಡೆಯುತ್ತಿದ್ದು, ಟಿವಿ ವಾಹಿನಿ ಪರವಾಗಿ ಕೆಲಸ ಮಾಡಲು ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಕ್ರೀಡಾ ನಿರೂಪಕಿ ಜೈನಾಬ್‌ ಅಬ್ಬಾಸ್‌ರನ್ನು ಭಾರತ ಗಡಿ ಪಾರು ಮಾಡಿತ್ತು.

ಇದಕ್ಕೆ ಕಾರಣ10 ವರ್ಷಗಳ ಹಿಂದೆ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಭಾರತ ವಿರೋಧಿ ಹಾಗೂ ಹಿಂದು ಧರ್ಮದ ವಿರುದ್ಧವಾಗಿ ಅವರು ಮಾಡಿದ್ದ ಟ್ವೀಟ್‌ಗಳ ವಿರುದ್ಧ ವಕೀಲ ವಿನೀತ್‌ ಜಿಂದಾಲ್‌ ಸೈಬರ್‌ ಕ್ರೈಮ್‌ಗೆ ದೂರು ನೀಡಿದ್ದರು. ಇದರ ಬೆನ್ನಲ್ಲಿಯೇ ಭಾರತಕ್ಕೆ ಆಗಮಿಸಿದ್ದ ಅವರನ್ನು ಗಡಿಪಾರು ಮಾಡಲಾಗಿದೆ ಎಂದು ಅವರ ಕೆಲಸ ಮಾಡಲು ಪಾಕಿಸ್ತಾನದ ಟಾಮಾ ಟಿವಿಯೇ ತನ್ನ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿತ್ತು.

ಇದಾದ ಬಳಿಕ ಟ್ವೀಟ್‌ಅನ್ನು ಅಳಿಸಿ ಹಾಕಿ, ಜೈನಾಬ್‌ ವೈಯಕ್ತಿಕ ಕಾರಣದಿಂದ ಭಾರತದಿಂದ ಹೊರಟಿದ್ದು, ಪ್ರಸ್ತುತ ದುಬೈನಲ್ಲಿದ್ದಾರೆ ಎಂದು ತಿಳಿಸಿದ್ದರು.

ಇದರ ನಡುವೆ ಜೈನಾಬ್‌ ಅಬ್ಬಾಸ್‌ ಗುರುವಾರ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, 10 ವರ್ಷಗಳ ಹಿಂದೆ ತಾವು ಮಾಡಿದ್ದ ಟ್ವೀಟ್‌ಗೆ ಭಾರತೀಯರಲ್ಲಿ ಕ್ಷಮೆ ಯಾಚಿಸಿದ್ದಾರೆ. ತಮ್ಮ ಪೋಸ್ಟ್‌ನಿಂದ ಉಂಟಾದ ನೋವಿಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

‘ಅಂದು ಮಾಡಿದ್ದ ಟ್ವೀಟ್‌ ಇಂದು ನನ್ನ ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ ಅಥವಾ ಇಂದು ವ್ಯಕ್ತಿಯಾಗಿ ನಾನು ಯಾರು ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ‘ ಎಂದು ಅಬ್ಬಾಸ್‌ ಬರೆದುಕೊಂಡಿದ್ದಾರೆ.

ನಾನು ಬರೆದ ಭಾಷೆಗೆ ಹಾಗೂ ಅಂಥ ವಿಚಾರಗಳಿಗೆ ಇಂದು ಯಾವುದೇ ಸ್ಥಳವಿಲ್ಲ ಎಂದು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಅಂದಿನ ನನ್ನ ಟ್ವೀಟ್‌ನಿಂದ ಮನನೊಂದಿರುವ ಯಾರಿಗಾದರೂ ನಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನು ಭಾರತದಿಂದ ತಮ್ಮನ್ನು ಗಡಿಪಾರು ಮಾಡಲಾಗಿದೆ ಎನ್ನುವ ಸುದ್ದಿಯನ್ನು ನಿರಾಕರಿಸಿದರು. ಆದರೆ, ಭದ್ರತಾ ಕಾರಣದಿಂದಾಗಿ ತಾವು ಭಾರತವನ್ನು ತೊರೆದಿದ್ದಾಗಿ ತಿಳಿಸಿದ್ದಾರೆ. ‘ಭಾರತದಿಂದ ಹೊರಹೋಗುವಂತೆ ನನಗೆ ಹೇಳಿರಲಿಲ್ಲ ಅಥವಾ ನನ್ನನ್ನೂ ಗಡಿಪಾರು ಮಾಡಲಾಗಿರಲಿಲ್ಲ. ಆದರೆ, ಆನ್‌ಲೈನ್‌ನಲ್ಲಿ ನನ್ನ ಕುರಿತಾಗಿ ಬರುತ್ತಿದ್ದ ಪ್ರತಿಕ್ರಿಯೆಗಳಿಂದ ಭಯಭೀತಳಾಗಿದ್ದೆ’ ಎಂದು ಬರೆದಿದ್ದಾರೆ.

ಸುರಕ್ಷತೆಗೆ ಯಾವುದೇ ತಕ್ಷಣದ ಬೆದರಿಕೆ ಇಲ್ಲದಿದ್ದರೂ, ನನ್ನ ಕುಟುಂಬ ಮತ್ತು ಗಡಿಯ ಎರಡೂ ಕಡೆಯ ಸ್ನೇಹಿತರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅಬ್ಬಾಸ್ ಹೇಳಿದರು.

ಏನು ಸಂಭವಿಸಿದೆ ಎಂಬುದನ್ನು ಪ್ರತಿಬಿಂಬಿಸಲು ನನಗೆ ಸ್ವಲ್ಪ ಸ್ಥಳ ಮತ್ತು ಸಮಯ ಬೇಕಿತ್ತು ಭಾರತದಲ್ಲಿ ಉಳಿದಿಕೊಂಡಿದ್ದ ಅಲ್ಪ ಸಮಯದಲ್ಲಿ ಎಲ್ಲರೊಂದಿಗಿನ ದೈನಂದಿನ ಸಂವಹನವು ಸುಗಮವಾಗಿ ಸಾಗಿತ್ತು. ನಾನು ನಿರೀಕ್ಷೆ ಮಾಡಿದಂತೆ ಯಾವುದೇ ಸಮಸ್ಯೆಗಳೂ ಉದ್ಭವಿಸಿರಲಿಲ್ಲ ಎಂದು ಹೇಳಿದ್ದಾರೆ.

ಈ ನಡುವೆ ಶನಿವಾರ (ಅಕ್ಟೋಬರ್ 14) ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ವರದಿ ಮಾಡಲು ಪಾಕಿಸ್ತಾನದ ಪತ್ರಕರ್ತರು ಭಾರತಕ್ಕೆ ಪ್ರಯಾಣಿಸಲು ಇನ್ನೂ ವೀಸಾಗಾಗಿ ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!