26 ವಾರಕ್ಕಿಂತ ಹೆಚ್ಚು ಕಾಲ ಗರ್ಭಿಣಿಯ ಭ್ರೂಣದಲ್ಲಿನ ಅಸಹಜತೆ ಕುರಿತು ಪರೀಕ್ಷಿಸಲು ಏಮ್ಸ್ ಗೆ ​ಸುಪ್ರೀಂ ಕೋರ್ಟ್ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿವಾಹಿತ ಮಹಿಳೆಯೊಬ್ಬರಿಗೆ 26 ವಾರಗಳ ಗರ್ಭಪಾತಕ್ಕೆ ಅನುಮತಿ ಕುರಿತಾದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಇಂದು ಮಹತ್ವದ ಸೂಚನೆಯನ್ನು ನೀಡಿದೆ.

26 ವಾರಗಳಿಗಿಂತ ಹೆಚ್ಚು ಕಾಲ ಗರ್ಭಿಣಿಯಾಗಿರುವ ವಿವಾಹಿತ ಮಹಿಳೆಯ ಭ್ರೂಣದಲ್ಲಿ ಏನಾದರೂ ಅಸಹಜತೆ ಕಂಡುಬರುತ್ತದೆಯೇ ಎಂದು ಪರೀಕ್ಷಿಸಲು ದೆಹಲಿಯ ಏಮ್ಸ್​ ವೈದ್ಯಕೀಯ ಮಂಡಳಿಗೆ ಸೂಚಿಸಿತು.

ಅಲ್ಲದೇ, ಪ್ರಸವಾನಂತರದ ಖಿನ್ನತೆ ಮತ್ತು ಮನೋರೋಗದಿಂದ ಬಳಲುತ್ತಿರುವ ಮಹಿಳೆಯ ಆರೋಗ್ಯ ಸ್ಥಿತಿಯನ್ನೂ ಪರೀಕ್ಷಿಸಲು ನಿರ್ದೇಶನ ನೀಡಲಾಗಿದೆ.

ಮಹಿಳೆಯ ಪರ ವಕೀಲ ವಕೀಲ ಅಮಿತ್ ಮಿಶ್ರಾ, 2022ರ ಅಕ್ಟೋಬರ್ 10ರಿಂದ ಪ್ರಸವಾನಂತರದ ಮನೋರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಅರ್ಜಿದಾರರ ಔಷಧಿ ಪಟ್ಟಿ ಸಲ್ಲಿಸಿದರು. ಆದರೆ, ಆಗ ‘ಕೈ ಬರಹದ ಪ್ರಿಸ್ಕ್ರಿಪ್ಷನ್ ಔಷಧಿಗಳು ಕಾಯಿಲೆಯ ಸ್ವರೂಪವನ್ನು ನಿರ್ದಿಷ್ಟವಾಗಿ ತಿಳಿಸಲ್ಲ. ಎಲ್ಲ ಪ್ರಿಸ್ಕ್ರಿಪ್ಷನ್​ಗಳು ಕೂಡ ಅನಾರೋಗ್ಯದ ಸ್ವರೂಪದ ಬಗ್ಗೆ ಮೌನವಾಗಿರುತ್ತವೆ” ಎಂದು ಪೀಠ ಹೇಳಿತು.

ಭ್ರೂಣವು ಯಾವುದೇ ಅಸಹಜತೆಯಿಂದ ಬಳಲುತ್ತಿದೆಯೇ? ಮತ್ತು ಗರ್ಭಾವಸ್ಥೆಯ ಪೂರ್ಣಾವಧಿಯ ಮುಂದುವರಿಕೆಗೆ ಶಿಫಾರಸು ಮಾಡಲಾದ ಔಷಧಿಗಳಿಂದ ಅಪಾಯಕ್ಕೆ ಒಳಗಾಗುತ್ತದೆ ಎಂದು ಸೂಚಿಸಲು ಯಾವುದೇ ಪುರಾವೆಗಳಿವೆಯೇ ಎಂಬ ಕುರಿತು ಏಮ್ಸ್​ನ ವೈದ್ಯಕೀಯ ಸಲಹೆ ಪಡೆಯುವ ಅಗತ್ಯವಿದೆ’ ಎಂದು ತಿಳಿಸಿದರು. ಇದೇ ವೇಳೆ, ಭ್ರೂಣವು ಸಾಮಾನ್ಯವಾಗಿದೆ’ ಎಂಬ ಏಮ್ಸ್​ನ ಹಿಂದಿನ ವರದಿಯ ಅಂಶವನ್ನೂ ಗಮನಿಸಿದ ಸುಪ್ರೀಂ, ಈ ವಿಷಯದ ಸಂದೇಹವನ್ನು ಮೀರಿ ಹೆಚ್ಚಿನ ವರದಿ ಸಲ್ಲಿಸಬಹುದು ಎಂದು ತಿಳಿಸಿತು.

ಅರ್ಜಿದಾರರ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಬಗ್ಗೆ ತಮ್ಮದೇ ಆದ ಸ್ವತಂತ್ರ ಮೌಲ್ಯಮಾಪನ ಕೈಗೊಳ್ಳಲು ಏಮ್ಸ್​ಗೆ ಸ್ವಾತಂತ್ರ್ಯವಿದೆ. ಇಂದೇ ಏಮ್ಸ್ ವೈದ್ಯಕೀಯ ಮಂಡಳಿಯ ಮುಂದೆ ಹಾಜರಾಗಬೇಕು ಎಂದು ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿತು. ಬಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ನಿಗದಿ ಮುಂದೂಡಲಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!