ಹೊಸದಿಗಂತ ವರದಿ ಹುಬ್ಬಳ್ಳಿ:
ವಕ್ಫ್ ಬೋಡ್೯ ತಿದ್ದುಪಡಿ ಮಸೂದೆಯ ಸಂಸದೀಯ ಜಂಟಿ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ ಅವರಿಗೆ ನೂರಾರು ಜನರು ಬಂದು ಮನವಿ ಸಲ್ಲಿಸಿದರು.
ತಾಲೂಕುವಾರು ನಿಯೋಗ ಮಾಡಿಕೊಂಡು ಬಂದು ಬಿಜೆಪಿ ಶಾಸಕರು ಮನವಿ ಸಲ್ಲಿಸಿದರು. ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ, ಎಂ. ಆರ್. ಪಾಟೀಲ, ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರಿಂದ ಸಮಿತಿ ಅಧ್ಯಕ್ಷರಾದ ಜಗದಾಂಬಿಕಾ ಪಾಲ ಮನವಿ ಸ್ವೀಕರಿಸಿದರು.
ಅಷ್ಟೇ ಅಲ್ಲದೇ ಬಿಜೆಪಿ ವಕ್ಫ್ ಬೋಡ್೯ ಆಸ್ತಿ ಕಬಳಿಸಿಸುತ್ತಿರುವ ಹಿನ್ನೆಲೆ ಬಿಜೆಪಿ ಸತ್ಯ ಶೋಧನಾ ಸಮಿತಿ ರಾಜ್ಯಾದ್ಯಂತ ಅಲೆದಾಡಿ ವರದಿ ಸಿದ್ಧ ಪಡಿಸಿದ್ದು, ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಅವರು ಜಂಟಿ ಸಮಿತಿ ಅಧ್ಯಕ್ಷ ಪಾಲ ಅವರಿಗೆ ಮನವಿ ಸಲ್ಲಿಸಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ರಾಜ್ಯದಲ್ಲಿ 50 ಸಾವಿರ ಆಸ್ತಿಗಳನ್ನು ವಕ್ಫ್ ಬೋಡ್೯ ಕಬಳಿಸಿದೆ. ಇನ್ನೂ ಗ್ರಾಮ ಪಂಚಾಯತಿ ಅಧಿಕಾರಿಗಳು ಚುನಾವಣೆ ಬಳಿಕ ನೋಟಿಸ್ ನೀಡಲು ಸಿದ್ಧ ಪಡಿಸಿದ್ದಾರೆ ಎಂದು ಆರೋಪಿಸಿದರು.
ಕುಂದಗೋಳ, ನರಗುಂದ ಸೇರಿದಂತೆ 700 ರಿಂದ 800 ಎಕರೆ ವಕ್ಪ್ ಬೋಡ್೯ಗೆ ನೋಂದಣಿ ಮಾಡಲಾಗಿದ್ದು, ಇದನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸಭೆಯಲ್ಲಿದ್ದ ರೈತರ ಮನವಿ ಮಾಡಿದರು.
ವಕ್ಫ್ ಹಟಾವೋ ದೇಶ ಬಚಾವೋ ಎಂಬ ಘೋಷಣೆ ಕೂಗಿದರು.
ಜಂಟಿ ಸಮಿತಿ ಮುಂದೆ ರಾಜ್ಯ ಸರ್ಕಾರ ಹಾಗೂ ವಕ್ಫ್ ಬೋಡ್೯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ವಕ್ಫ್ ಬೋಡ್೯ ತಿದ್ದುಪಡಿ ಮಸೂದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.