ಈಗಲೇ ವಿಚಾರಣೆಗೆ ಹಾಜರಾಗಿ: ಪ್ರಜ್ವಲ್, ಹೆಚ್.ಡಿ ರೇವಣ್ಣಗೆ ಎಸ್‍ಐಟಿ ನೋಟಿಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಇದೀಗ ಎಸ್‍ಐಟಿ  ಅಂಗಳದಲ್ಲಿದೆ. ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ವಿಚಾರಣೆಗೆ ಹಾಜರಾಗಿ ಎಂದು ಎಸ್‌ಐಟಿ ನೊಟೀಸ್‌ ನೀಡಿದೆ.

ಸದ್ಯ ಪ್ರಕರಣದ ತನಿಖೆಗೆ ಇಳಿದಿರುವ ವಿಶೇಷ ತನಿಖಾ ತಂಡದ  (SIT) ಅಧಿಕಾರಿಗಳು ಪ್ರಜ್ವಲ್ ರೇವಣ್ಣ, ರೇವಣ್ಣಗೆ ಶಾಕ್ ಕೊಟ್ಟಿದ್ದಾರೆ. ಅಪ್ಪ- ಮಗನಿಗೆ ನೋಟಿಸ್ ಕೊಟ್ಟಿರುವ ಅಧಿಕಾರಿಗಳು ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.

ನೋಟಿಸ್ ಸಿಕ್ಕ ತಕ್ಷಣ ಹಾಜರಾಗಿ ವಿಚಾರಣೆಗೆ ಸಹಕರಿಸಬೇಕು. ಇಲ್ಲದೇ ಹೋದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನೋಟಿಸ್‍ನಲ್ಲಿಯೇ ಕಾನೂನು ಕ್ರಮದ ಎಚ್ಚರಿಕೆ ಉಲ್ಲೇಖ ಮಾಡಲಾಗಿದೆ. ಇಂದು ರೇವಣ್ಣ ಹಾಗೂ ಪ್ರಜ್ವಲ್‌ ಎಸ್‌ಐಟಿ ಮುಂದೆ ಹಾಜರಾಗಬೇಕಿದೆ. ಪ್ರಜ್ವಲ್‌ ಜರ್ಮನಿಯಲ್ಲಿದ್ದಾರೆ, ಇಂದು ವಿಚಾರಣೆಗೆ ಹಾಕರಾಗ್ತಾರಾ ಇಲ್ಲವಾ ಎಂದು ಎಲ್ಲರೂ ಕಾದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!