CINE | ಸಿನಿಮಾಗೋಸ್ಕರ ದಪ್ಪ ಆಗೋದು, ಸಣ್ಣ ಆಗೋದು ಇದ್ಯಾವ್ದೂ ಸುಲಭ ಅಲ್ಲ ಎಂದ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೆಟ್‌ಫ್ಲಿಕ್ಸ್‌ ಸೂಪರ್‌ ಹಿಟ್‌ ಸಿನಿಮಾ ಅಮರ್‌ ಸಿಂಗ್‌ ಚಮ್ಕೀಲಾದಲ್ಲಿ ನಟಿ ಪರಿಣಿತಿ ಚೋಪ್ರಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಈ ಒಂದು ಸಿನಿಮಾಗಾಗಿಯೇ ಪರಿಣಿತಿ 15  ಕೆಜಿ ತೂಕ ಹೆಚ್ಚಿಸಿಕೊಂಡಿದ್ದು, ತಮ್ಮ ತೂಕ ಹೆಚ್ಚಳದ ಜರ್ನಿ ಬಗ್ಗೆ ಮಾತನಾಡುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.

Parineeti Chopra says she was asked to spend Rs 4 lakh per month on  fitness; co-star said if she can't afford it, she should reconsider being  an actor | Bollywood News -ಎಲ್ಲರೂ ನನ್ನನ್ನು ದಪ್ಪ ಇದ್ದೀಯಾ, ಸಣ್ಣ ಆಗು ಎಂದು ಟ್ರೋಲ್‌ ಮಾಡ್ತಿದ್ದಾರೆ. ಆದರೆ ಅವರಿಗೆ ನನ್ನ ಪರಿಸ್ಥಿತಿ ಬಗ್ಗೆ ಗೊತ್ತಿಲ್ಲ.ನಾನು ಎಷ್ಟು ಕಷ್ಟ ಪಟ್ಟಿದ್ದೇನೆ ಎನ್ನುವ ಅರಿವೂ ಇಲ್ಲ. ಎರಡು ವರ್ಷದಿಂದ ವರ್ಕೌಟ್‌ ಮಾಡುತ್ತಾ, ಒಳ್ಳೆ ಆಹಾರ ತಿನ್ನುತ್ತಾ ಫಿಟ್‌ ಆಗಿದ್ದೆ. ಆದರೆ ಅದೇ ಸಮಯಕ್ಕೆ ಚಮ್ಕೀಲಾ ಸಿನಿಮಾ ಆಫರ್‌ ಸಿಕ್ಕಿತ್ತು. ಸಿನಿಮಾ ರಿಜೆಕ್ಟ್‌ ಮಾಡುವಷ್ಟು ದಡ್ಡಿ ನಾನಾಗಿರಲಿಲ್ಲ. ತಕ್ಷಣ ಒಪ್ಪಿಕೊಂಡೆ. ಆದರೆ ಇಮ್ತಿಯಾಜ್‌ ಅಲಿ ಸರ್‌ ನೀನು ಚಮ್ಕೀಲಾ ಪತ್ನಿ ಅಮರ್‌ಜೋತ್‌ ರೀತಿ ಕಾಣ್ತಾ ಇಲ್ಲ, ಸ್ವಲ್ಪ ದಪ್ಪ ಆಗಬೇಕು ಎಂದರು.

Parineeti Chopra | Parineeti Chopraಆ ಕ್ಷಣವೇ ನನ್ನ ಎರಡು ವರ್ಷದ ಡಯಟ್‌ ಮರೆತೆ, ಬರೀ ಜಂಕ್‌ ಫುಡ್‌, ಅನಾರೋಗ್ಯಕರ ಆಹಾರ, ಊಟದ ತಕ್ಷಣ ನಿದ್ದೆ ಮಾಡ್ತಾ ಇದ್ದೆ. ಬೆಳಗ್ಗೆ ಎದ್ದಾಗ ಮುಖ ಊದಿಕೊಂಡಂತೆ ಇತ್ತು. ಸಿನಿಮಾಗೋಸ್ಕರ ತುಂಬಾ ತ್ಯಾಗ ಮಾಡಿದ್ದೇನೆ. ಆರೋಗ್ಯ ಸರಿ ಇಲ್ಲದೆ ಮೂಡ್‌ ಸರಿ ಇರುತ್ತಿರಲಿಲ್ಲ. ಎಲ್ಲರ ಮೇಲೂ ರೇಗುತ್ತಿದೆ. ಇದೇ ಪಿರಿಯಡ್‌ನಲ್ಲಿ ನನ್ನ ತುಂಬಾ ಮುಖ್ಯವಾದ ದಿನ , ಅಂದ್ರೆ ಮದುವೆ ಕೂಡ ಆಗಿದ್ದೇನೆ. ಮತ್ತೆ ಸಣ್ಣ ಆಗೋಕೆ ಸಮಯ ಬೇಕಲ್ವಾ? ಬಾಡಿ ಶೇಮಿಂಗ್‌ ಅಸಹ್ಯಕರ ಸಂಗತಿ. ಜನ ನನ್ನನ್ನು ಪ್ರೆಗ್ನೆಂಟ್‌ ಅಂದ್ರು, ಏನೋ ರೋಗ ಅಂದ್ರು, ಸಣ್ಣ ಆಗಿ ಎಂದು ಹಿಂಸೆ ಕೊಟ್ಟರು ಎಂದು ಪರಿಣಿತಿ ಹೇಳಿದ್ದಾರೆ.

Parineeti Chopra talks about her sindoor and saree fashion week look |  Bollywood - Hindustan Times

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!