Friday, September 30, 2022

Latest Posts

ಓಟ್ ಬ್ಯಾಂಕ್‌ಗಾಗಿ ಸಿದ್ದರಾಮಯ್ಯರಿಂದ ತುಷ್ಠೀಕರಣ ರಾಜಕೀಯ: ಪ್ರಹ್ಲಾದ್ ಜೋಶಿ

ಹೊಸದಿಗಂತ ವರದಿ,ಹುಬ್ಬಳ್ಳಿ:

ಕಾಂಗ್ರೆಸ್ ನ ಇಂದಿನ ನಕಲಿ ಗಾಂಧಿಗಳನ್ನು ಓಲೈಸುವ ಸಲುವಾಗಿ ಹಾಗೂ ಓಟ್ ಬ್ಯಾಂಕ್‌ಗಾಗಿ ವೀರ ಸಾವರ್ಕರ್ ಬಗ್ಗೆ ಮಾತನಾಡಿ ತುಷ್ಠೀಕರಣ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಮಹಾತ್ಮ ಗಾಂಧಿ ಹಾಗೂ ಇಂದಿರಾ ಗಾಂಧಿಯವರು ಸಾವರ್ಕರ್‌ರವರು ದೇಶ ಭಕ್ತನೆಂದು ಒಪ್ಪಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡುವುದರ ಜೊತೆ ಪ್ರಚೋದಿಸುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಓಟ್ ಬ್ಯಾಂಕ್ ಮಾಡಲು ಹಿಂದೆ ಕಾಂಗ್ರೆಸ್ ಮುಂದಾಗಿತ್ತು. ಸಿದ್ದರಾಮಯ್ಯ ತೃಷ್ಠೀಕರಣ ಮಾಡಿ ಮತ ಪಡೆಯಬಹುದು ಎಂಬ ಭ್ರಮೆಯಲ್ಲಿ ಓಡಾಡುತ್ತಿದ್ದಾರೆ. ದೇಶದಲ್ಲಿ ಛತ್ತೀಸ್‌ಗಡ ಹಾಗೂ ರಾಜಸ್ಥಾನದಲ್ಲಿ ಮಾತ್ರ ಕಾಂಗ್ರೆಸ್ ಅಕಾರದಲ್ಲಿದೆ. ಸದ್ಯದಲ್ಲೇ ಅಲ್ಲಿಯೂ ಸಹ ಅಸ್ತಿತ್ವ ಕಳೆದುಕೊಳ್ಳಲಿದೆ. ಸಿದ್ದರಾಮಯ್ಯ ಇದನ್ನು ಅರ್ಥ ಮಾಡಿಕೊಳ್ಳಬೇಕು.

ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಮಾತನಾಡಿದ್ದು ಹಾಗೂ ಪ್ರತಿಭಟನಾಕಾರರು ಅವರ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು. ಬಿಜೆಪಿಯ ಯಾವುದೇ ನಾಯಕರು ಇಂತಹ ಘಟನೆಗಳಿಗೆ ಪ್ರಚೋದನೆ ನೀಡಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಯಾರು ಮೀತಿಯನ್ನು ಮೀರಬಾರದು ಎಂದು ತಿಳಿಸಿದರು.

ಗೋಡ್ಸೆ ಪೂಜೆ ವಿಚಾರ: ನಾವು ಯಾವತ್ತೂ ಗೋಡ್ಸೆಯನ್ನ ಪೂಜೆ ಮಾಡಿಲ್ಲ. ಸಿದ್ಧರಾಮಯ್ಯ ಅವರು ಯಾರದೋ ತುಷ್ಠೀಕರಣಕ್ಕಾಗಿ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಯಾವುದೇ ಕಾರಣಕ್ಕೂ ಹಿಂಸೆಯ ರಾಜಕಾರಣ ಒಪ್ಪಲ್ಲ. ಈ ಹಿಂದೆ ಹಿಂಸಾತ್ಮ ಕೃತ್ಯ ವೆಸಗುವ ಎಸ್ ಡಿಪಿಐ ಅವರ ಮೇಲಿನ ಪ್ರಕರಣ ಸಿದ್ದರಾಮಯ್ಯ ಹಿಂಪಡೆದಿದ್ದರು. ತುಷ್ಠೀಕರಣದ ಪರಾಕಾಷ್ಟೆ ಸಿದ್ಧರಾಮಯ್ಯ ಅವರ ಕಾಲದಲ್ಲಾಗಿತ್ತು. ಸಿದ್ಧರಾಮಯ್ಯ ಅವರಿಗೆ ಹಗಲು ಕನಸು ಕಾಣಲು ಅಕಾರ ಇದೆ ಹೀಗಾಗಿ ಕನಸು ಕಾಣುತ್ತಲೇ ಇರಲಿ ಎಂದು ಮುಂದಿನ ಬಾರಿ ಕಾಂಗ್ರೆಸ್ ಅಕಾರ ನಿಶ್ಚಿತ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!