Friday, October 7, 2022

Latest Posts

ಚೀನಾ ಅವಲಂಬನೆ ತಪ್ಪಿಸಿ ವಿಯೆಟ್ನಾಮಿನಲ್ಲಿ ವಾಚ್ ಮತ್ತು ಮ್ಯಾಕ್ಬುಕ್ ತಯಾರಿಕೆಗೆ ಆ್ಯಪಲ್ ಚಿಂತನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಂತಹಂತವಾಗಿ ಚೀನಾದಿಂದ ಆದಷ್ಟೂ ಹೊರಗೆ ಕಾಲಿರಿಸಬೇಕು ಎಂಬ ಚಿಂತನೆಯಲ್ಲಿದ್ದಂತಿದೆ ಅಮೆರಿಕದ ಪ್ರಸಿದ್ಧ ಕಂಪನಿ ಆ್ಯಪಲ್. ಇದೇ ಮೊದಲ ಬಾರಿಗೆ ವಿಯೆಟ್ನಾಂ ದೇಶದಲ್ಲಿ ಆ್ಯಪಲ್ ವಾಚ್ ಮತ್ತು ಮ್ಯಾಕ್ಬುಕ್ ತಯಾರಿಕೆಗೆ ಮಾತುಕತೆ ನಡೆದಿರುವುದಾಗಿ ಮಾಧ್ಯಮ ವರದಿಗಳು ಹೇಳುತ್ತಿವೆ.

ವಿಯೆಟ್ನಾಮಿನಲ್ಲಿ ಆ್ಯಪಲ್ ಅದಾಗಲೇ ದೊಡ್ಡಮಟ್ಟದ ಉಪಸ್ಥಿತಿಯನ್ನು ಹೊಂದಿದೆ. ಆದರೆ ವಾಚ್ ಮತ್ತು ಮ್ಯಾಕ್ಬುಕ್ ಉತ್ಪನ್ನಗಳ ತಯಾರಿಕೆ ಇದುವರೆಗೆ ಆ ದೇಶದಲ್ಲಿ ಆಗುತ್ತಿರಲಿಲ್ಲ. ಚೀನಾದ ಘಟಕದಿಂದಲೇ ಏಷ್ಯಕ್ಕೆ ಈ ಉತ್ಪನ್ನಗಳು ಹೊರಬೀಳುತ್ತಿದ್ದವು. ವಿಯೆಟ್ನಾಮಿನಲ್ಲಿ ಆ್ಯಪಲ್ ತನ್ನ ಅಧೀನ ಉದ್ದಿಮೆಯ ಮೂಲಕ ಅದಾಗಲೇ ದೊಡ್ಡಮಟ್ಟದಲ್ಲಿ ಐಪಾಡ್ ಟ್ಯಾಬ್ಲೆಟ್ ಮತ್ತು ಏರ್ಪಾಡ್ ಕಿವಿಯಲ್ಲಾಲಿಸುವ ಸಾಧನಗಳನ್ನು ಉತ್ಪಾದಿಸುತ್ತಿದೆ.

ಇನ್ನು ಆ್ಯಪಲ್ ಮೊಬೈಲ್ ಫೋನುಗಳ ಉತ್ಪಾದನೆ ವಿಷಯಕ್ಕೆ ಬಂದರೆ, ಈ ವರ್ಷ ಚೀನಾದ ಫ್ಯಾಕ್ಟರಿಗಳಿಂದ ಬೇರೆ ದೇಶಗಳಿಗೆ ರಫ್ತಾಗಲಿರುವಷ್ಟೇ ಫೋನುಗಳು ಭಾರತದ ಆ್ಯಪಲ್ ಅಧೀನ ಉದ್ದಿಮೆ ಫಾಕ್ಸ್ ಕಾನ್ ನಿಂದಲೂ ಆಗಲಿದೆ ಎಂದು ಈ ಹಿಂದೆ ವರದಿಯಾಗಿತ್ತು.
ಬಹು ಆಯಾಮಗಳಲ್ಲಿ ಆ್ಯಪಲ್ ಚೀನಾ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಯತ್ನಿಸುತ್ತಿರುವುದಂತೂ ಇದರಿಂದ ಸ್ಪಷ್ಟವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!