ಆ್ಯಪಲ್ ಜ್ಯೂಸ್ ಕುಡಿದ ನಿಮಗೆ ಸೇಬು ಹಣ್ಣಿನ ಸಾರಿನ ಬಗ್ಗೆ ಗೊತ್ತಾ?

ಆ್ಯಪಲ್ ಜ್ಯೂಸ್, ಆ್ಯಪಲ್ ಮಿಲ್ಕ್‌ಶೇಕ್ ಕುಡಿದಿರುವ ನಿಮಗೆ ಆ್ಯಪಲ್ ಸಾರು ಕುರಿತು ಹೇಳಿದರೆ, ಶಾಕ್ ಆಗಬಹುದು. ಆದರೆ ಆರೋಗ್ಯಕ್ಕೆ ಉತ್ತಮವಾದ ಸೇಬು ಹಣ್ಣಿನಿಂದ ರುಚಿ ರುಚಿಯಾದ ಸಾರು ಕೂಡ ತಯಾರಿಸಬಹುದು. ನೀವೂ ಒಮ್ಮೆ ಟ್ರೈಮಾಡಿ ನೋಡಿ.

ಬೇಕಾದ ಸಾಮಗ್ರಿಗಳು: ಸೇಬು ಹಣ್ಣು 2, ಹಸಿ ಮೆಣಸಿನಕಾಯಿ 4ರಿಂದ 6, ರುಚಿಗೆ ಉಪ್ಪು, ಬೆಲ್ಲ (ಬೇಕಿದ್ದರೆ)

ಒಗ್ಗರಣೆಗೆ: ಎಣ್ಣೆ, ಸಾಸಿವೆ, ಅರಿಶಿಣ, ಕರಿಬೇವು, ಇಂಗು, ಜೀರಿಗೆ, ಬೆಳ್ಳುಳ್ಳಿ

ತಯಾರಿಸುವ ವಿಧಾನ:
ಸೇಬು ಹಣ್ಣನ್ನು ಚೆನ್ನಾಗಿ ತೊಳೆದು ಹೋಳುಗಳನ್ನಾಗಿ ಮಾಡಿ, ಬೀಜ ತೆಗೆದು ಸ್ವಚ್ಛ ಮಾಡಿ ಮುಳುಗುವಷ್ಟು ನೀರಿನಲ್ಲಿ ಬೇಯಿಸಿರಿ. ಅರೆಬೆಂದ ನಂತರ ಅದರ ಸಿಪ್ಪೆತೆಗೆದು ಒಂದು ಲೀಟರ್ ನೀರಿನಲ್ಲಿ ಹಾಕಿ ಮತ್ತೆ ಬೇಯಿಸಿರಿ. ಕುದಿ ಬರುತ್ತಿದ್ದಂತೆ ಉಪ್ಪು, ಹಣ್ಣು ಹುಳಿಯಿದ್ದರೆ ಸಿಹಿಗೆ ತಕ್ಕಷ್ಟು ಬೆಲ್ಲ ಹಾಕಿ ಒಮ್ಮೆ ಸೌಟಿನಿಂದ ಕದಡಿ. ಬೆಂದ ಹೋಳುಗಳಿಗೆ ಒಗ್ಗರಣೆ ಮಾಡಿ ಸೇರಿಸಿ, ಹತ್ತು ನಿಮಿಷ ಕುದಿಯಲು ಬಿಡಿ.

ಈ ಸೇಬು ಹಣ್ಣಿನ ಸಾರು ಬಿಸಿಬಿಸಿ ಅನ್ನದೊಡನೆ ಕಲಿಸಿ ತಿನ್ನಬಹುದು, ಸೂಪ್‌ನಂತೆ ಕುಡಿಯಲೂಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!