ಹೊಸದಿಗಂತ ಡಿಜಿಟಲ್ ಡೆಸ್ಕ್
ಐಸಿಸಿ ಮಹಿಳಾ ವಿಶ್ವಕಪ್ 2022ರಲ್ಲಿ ಟೀಮ್ ಇಂಡಿಯಾದ ಸೆಮಿಫೈನಲ್ ಭರವಸೆ ಇನ್ನೂ ಜೀವಂತವಾಗಿದೆ. ಬಾಂಗ್ಲಾದೇಶದ ವಿರುದ್ಧ ಮಿಥಾಲಿ ಪಡೆ ಅಸಾಧಾರಣ ಗೆಲುವಿನೊಂದಿಗೆ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿನಲ್ ತಲುಪಲು ಇದು ಗೆಲ್ಲಲೇಬೇಕಾದ ಪಂದ್ಯವಾಗಿತ್ತು. ಬಾಂಗ್ಲಾದೇಶ ವಿರುದ್ಧದ ಈ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ಯಾಸ್ತಿಕಾ ಭಾಟಿಯಾ 50 ರನ್ ಗಳಿಸಿದರೆ, ಶೆಫಾಲಿ ವರ್ಮಾ 42 ರನ್ ಗಳಿಸಿದರು. ಆರಂಭಿಕ ಆಟಗಾರ್ತಿ ಮಂಥನಾ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ ಒಟ್ಟು 5000 ರನ್ ಪೂರೈಸಿದ್ದಾರೆ.
ಗುರಿ ಕಡಿಮೆ ಇದ್ದ ಕಾರಣ ಟೀಂ ಇಂಡಿಯಾ ಗೆಲುವು ಬಹುತೇಕ ಅಸಾಧ್ಯವಾಗಿತ್ತು. ಆದರೆ, ಮಹಿಳಾ ಬೌಲರ್‌ಗಳ ದಾಳಿಗೆ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳು ಸೋಲೊಪ್ಪಿಕೊಂಡರು. ಹ್ಯಾಮಿಲ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 110 ರನ್‌ಗಳ ಜಯ ಸಾಧಿಸಿದೆ.
ಗುರಿ ಮುರಿಯಲು ಕಣಕ್ಕೆ ಇಳಿದ ಬಾಂಗ್ಲಾದೇಶ 25 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿತು. 15 ರನ್‌ಗಳಿಂದ ಎರಡನೇ ವಿಕೆಟ್ ಕಳೆದುಕೊಂಡಿತು. ಭಾರತದ ಬೌಲರ್‌ಗಳು ಬಾಂಗ್ಲಾ ವಿಕೆಟ್‌ಗಳನ್ನು ಉರುಳಿಸುವ ತವಕದಲ್ಲಿದ್ದರು. ಬಾಂಗ್ಲಾದೇಶ 40.3 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಬೌಲರ್‌ಗಳ ಪೈಕಿ ಸ್ನೇಹ್ ರಾಣಾ ಅತಿ ಹೆಚ್ಚು 4 ವಿಕೆಟ್ ಪಡೆದರು. ಜುಲನ್ ಗೋಸ್ವಾಮಿ ಎರಡು ವಿಕೆಟ್ ಪಡೆದರು. ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದರು. ಪೂಜಾ ವಸ್ತ್ರಕರ್ 2 ವಿಕೆಟ್ ಮತ್ತು ಪೂನಂ ಯಾದವ್ 1 ವಿಕೆಟ್ ಪಡೆದರು. ಅರ್ಧಶತಕ ಸಿಡಿಸಿದ ಯಾಸ್ತಿಕಾ ಭಾಟಿಯಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಮಾ. 27ರಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತನ್ನ ಕೊನೆಯ ಪಂದ್ಯವನ್ನು ಗೆದ್ದುಕೊಂಡರೆ, ಮಿಥಾಲಿ ಪಡೆ ಸೆಮಿಫೈನಲ್ ಅರ್ಹತೆ ಪಡೆಯಲಿದೆ.