ಭಾರತದ ಘಟಕದಲ್ಲಿ ನಾಲ್ಕುಪಟ್ಟು ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಲು ಯೋಜಿಸಿದೆ ಆಪಲ್ ಪೂರೈಕೆದಾರ ಫಾಕ್ಸ್‌ಕಾನ್: ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಪಲ್ ಪೂರೈಕೆದಾರ ಫಾಕ್ಸ್‌ಕಾನ್ ಎರಡು ವರ್ಷಗಳಲ್ಲಿ ಭಾರತದಲ್ಲಿನ ತನ್ನ ಐಫೋನ್ ಕಾರ್ಖಾನೆಯಲ್ಲಿ ಉದ್ಯೋಗಿಗಳನ್ನು ನಾಲ್ಕು ಪಟ್ಟು ಹೆಚ್ಚಿಸಲು ಯೋಜಿಸಿದೆ ಎಂದು ಮೂಲಗಳು ವರದಿ ಮಾಡಿವೆ.

ಶೂನ್ಯ ಕೋವಿಡ್‌ ನೀತಿಯಿಂದ ಚೀನಾದಲ್ಲಿ ಪ್ರಮುಖ ಉತ್ಪಾದನಾಘಟಕವು ಮುಚ್ಚಲ್ಪಟ್ಟಿರುವುದರಿಂದ ಉತ್ಪಾದನೆಯಲ್ಲಿ ಆಗುತ್ತಿರುವ ಅಡಚಣೆಯನ್ನು ಸರಿದೂಗಿಸಲು ಈ ನೀತಿ ಅನುಸರಿಸಲಾಗುತ್ತಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಕೆಲದಿನಗಳ ಹಿಂದಷ್ಟೇ ಚೀನಾದಲ್ಲಿನ ಫಾಕ್ಸ್‌ಕಾನ್‌ ಪ್ರಮುಖ ಉತ್ಪಾದನಾ ಘಟಕದಲ್ಲಿ ಕೋವಿಡ್‌ ಕಾಣಿಸಿಕೊಂಡಿತ್ತು. ಇದರಿಂದಾಗಿ ವಾರಗಳ ಕಾಲ ಘಟಕವನ್ನು ಸ್ತಗಿತಗೊಳಿಸಿ ಅಲ್ಲಿನ ಉದ್ಯೋಗಳನ್ನು ಕ್ವಾರಂಟೈನ್‌ ಗೆ ಒಳಪಡಿಸಲಾಗಿತ್ತು. ಅಲ್ಲದೇ ಕಾರ್ಖಾನೆಯ ಸುತ್ತಮುತ್ತಲಿನ ಜಾಗದಲ್ಲಿಯೂ ಕ್ವಾರಂಟೈನ್‌ ಮಾಡಲಾಗಿತ್ತು. ಇದು ಆಪಲ್‌ ನ ಬಹುಬೇಡಿಕೆಯ ಐಫೋನ್‌ 14 ಉತ್ಪಾದನೆಗೆ ಅಡಚಣೆ ಉಂಟು ಮಾಡುತ್ತದೆ ಎಂದು ಈ ಹಿಂದೆ ವರದಿಯಾಗಿದ್ದವು.

ಈ ಹಿನ್ನೆಲೆಯಲ್ಲಿ ಜಗತ್ತಿನ ಪ್ರಮುಖ ಉತ್ಪಾದನಾ ಕಂಪನಿಗಳೆಲ್ಲವೂ ಚೀನಾವನ್ನು ತೊರೆಯುತ್ತಿವೆ. ಆಪಲ್‌ ಪೂರೈಕೆದಾರ ಫಾಕ್ಸ್‌ ಕಾನ್‌ ಕೂಡ ಚೆನ್ನೈನಲ್ಲಿ ತನ್ನ ಉತ್ಪಾದನಾ ಘಟಕ ಸ್ಥಾಪಿಸಿದ್ದು ಪ್ರಸ್ತುತ ಇದನ್ನು ತನ್ನ ಪ್ರಮುಖ ಉತ್ಪಾದನಾ ಘಟವನ್ನಾಗಿಸುವತ್ತ ಚಿಂತಿಸುತ್ತಿದೆ ಎನ್ನಲಾಗಿದೆ. ಅಲ್ಲದೇ ಉತ್ಪಾದನೆಯಲ್ಲಿ ಅಡಚಣೆಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಭಾರತದ ಘಟಕದಲ್ಲಿ ನಾಲ್ಕುಪಟ್ಟು ಹೆಚ್ಚು ಉದ್ಯೋಗಿಗಳನ್ನು ನೇಮಿಸಲು ಕಂಪನಿ ಯೋಚಿಸಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!