ಕ್ಲಿನಿಕಲ್ ಪರೀಕ್ಷೆ ಮಾಡದೆಯೇ ಮಹಿಳೆಯರ ಗರ್ಭಧಾರಣೆಯನ್ನು ಪತ್ತೆಹಚ್ಚುವ ಆಪಲ್ ವಾಚ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಂತ್ರಜ್ಞಾನದ ವಿಷಯಕ್ಕೆ ಬಂದಾಗ ಥಟ್‌ ಅಂತ ನೆನಪಿಗೆ ಬರೋದೆ ಆಪಲ್ ಗ್ಯಾಜೆಟ್‌ಗಳು. ಆಪಲ್ ಫೋನ್, ಆಪಲ್ ವಾಚ್. ಆಪಲ್ ಬ್ರಾಂಡ್ ಸಾಧನಗಳು ದುಬಾರಿ ಆದರೆ ಅವು ಜೀವ ರಕ್ಷಕಗಳು ಅಂದರೆ ನಂಬಲೇಬೇಕು. ಹೃದಯಾಘಾತವಾಗುವ ಸಂಭವವಿದ್ದರೆ ಆಪಲ್ ವಾಚ್ ಸೂಚನೆ ನೀಡುತ್ತದೆ. ಇದರಿಂದ ಅದೆಷ್ಟೋ ಜನರು ಪ್ರಾಣ ಉಳಿಸಿಕೊಂಡ ಸುದ್ದಿ ಕೇಳಿದ್ದೇವೆ. ಇದೀಗ ಕ್ಲಿನಿಕಲ್‌ ಪರೀಕ್ಷೆಗೆ ಒಳಗಾಗದೆಯೇ ಗರ್ಭಧಾರಣೆ ವಿಚಾರ ತಿಳಿಯಬಹುದು.

ಆಪಲ್ ವಾಚ್ ಬಿಪಿ ತಪಾಸಣೆ, ಸ್ಲೀಪಿಂಗ್ ಮೋಡ್, ಪಲ್ಸ್ ರೇಟ್ ಸ್ಟೆಪ್ ಎಣಿಕೆ ಮತ್ತು ಇತರ ವೈಶಿಷ್ಟ್ಯಗಳನ್ನು ಹೊಂದಿದೆ. ಅಂತಹ ಆಪಲ್ ವಾಚ್ ಇತ್ತೀಚೆಗೆ ಗರ್ಭಧಾರಣೆಯ ಪರೀಕ್ಷೆಯನ್ನು ಮಾಡಿದೆ. ಆಪಲ್ ವಾಚ್ ಧರಿಸಿದ್ದ ಮಹಿಳೆಯೊಬ್ಬರು ಗರ್ಭಿಣಿಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಇದನ್ನು ಸ್ವತಃ ಆಕೆಯೇ ಹೇಳಿದ್ದಾಳೆ. ತನ್ನ ಆಪಲ್ ವಾಚ್ ಕ್ಲಿನಿಕಲ್ ಪರೀಕ್ಷೆಗೆ ಒಳಗಾಗದೆ ಗರ್ಭಿಣಿಯಾಗಿರುವುದನ್ನು ಪತ್ತೆ ಮಾಡಿದೆ ಎಂದು ಬಹಿರಂಗಪಡಿಸಿದರು.  ಹೃದಯ ಬಡಿತದ ಮೂಲಕ ನೀವು ಗರ್ಭಿಣಿಯಾಗಿದ್ದು, ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂಬ ಸೂಚನೆ ನೀಡಿರುವುದು ಆಸಕ್ತಿದಾಯಕವಾಗಿದೆ.

ಆಪಲ್ ವಾಚ್ ಧರಿಸಿದ ಮಹಳೆ ತನ್ನ ಹೃದಯ ಬಡಿತದಲ್ಲಿ ಗಮನಾರ್ಹ ಹೆಚ್ಚಳವಾದುದ್ದನ್ನು ಗಮನಿಸಿದರು. ಕೂಡಲೇ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋದಾಗ ನಾಲ್ಕು ವಾರಗಳ ಗರ್ಭಿಣಿ ಎಂದು ವೈದ್ಯರು ಧೃಡಪಡಿಸಿದರು. ಈ ವಿಚಾರ ನನಗೆ ತಿಳಿಯದು ಆದರೆ, ನನ್ನ ಹೇಳಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಆಪಲ್ ವಾಚ್ ಅಧಿಕೃತ ಗರ್ಭಧಾರಣೆಯ ಪತ್ತೆ ಮಾಡುವ ವೈಶಿಷ್ಟ್ಯವನ್ನು ಹೊಂದಿಲ್ಲ. ಆದರೆ, ಸರಾಸರಿ ಹೃದಯ ಬಡಿತದಲ್ಲಿನ ಬದಲಾವಣೆಯಿಂದ ದೇಹದಲ್ಲಿ ನಡೆಯುವ ಅಸಹಜ ವಿಷಯಗಳನ್ನು ಇದು ಪತ್ತೆ ಮಾಡುತ್ತದೆ. iOS16 ಅಪ್‌ಡೇಟ್‌ನೊಂದಿಗೆ ಆಪಲ್ ವಾಚ್ ಮಹಿಳೆಯರಿಗಾಗಿ ಪ್ರಮುಖ ವೈಶಿಷ್ಟ್ಯವನ್ನು ತಂದಿದೆ. ಅದೇ ಸೈಕಲ್ ಟ್ರ್ಯಾಕಿಂಗ್ ಅಪ್ಲಿಕೇಶನ್. ಈ ವೈಶಿಷ್ಟ್ಯವು ಮಹಿಳೆಯರ ಋತುಚಕ್ರದ ಬಗ್ಗೆ ವಿವರಗಳನ್ನು ದಾಖಲಿಸಲು, ಮತ್ತು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here