ರಾಷ್ಟ್ರೋತ್ಥಾನ ತಪಸ್‌- ಸಾಧನಾ ಉಚಿತ ಶಿಕ್ಷಣ, ತರಬೇತಿಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು
ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಉಚಿತವಾಗಿ ಪಿಯುಸಿ ಶಿಕ್ಷಣ ಹಾಗೂ ಐಐಟಿ- ಜೆಇಇ ತರಬೇತಿ ಹಾಗೂ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿನಿಯರು ಪಿಯುಸಿ ಹಾಗೂ ನೀಟ್ ತರಬೇತಿ ಮತ್ತು ಇಂಟಿಗ್ರೇಟೆಡ್ ಬಿಎಸ್ಸಿ,ಬಿಎಡ್‌ ಶಿಕ್ಷಣವನ್ನು ಉಚಿತವಾಗಿ ಪಡೆಯಲು ರಾಷ್ಟ್ರೋತ್ಥಾನ ತಪಸ್‌ ಹಾಗೂ ಸಾಧನಾ ಅವಕಾಶ ಕಲ್ಪಿಸುತ್ತಿದೆ.
ಬೇಸ್ ಸಂಸ್ಥೆಯ ಸಹಯೋಗದೊಂದಿಗೆ ಈ ತರಬೇತಿಯನ್ನು ನೀಡಲಾಗುವುದು. ಜೊತೆಗೆ ಉಚಿತ
ಊಟ – ವಸತಿ ಸೌಲಭ್ಯವಿರಲಿದೆ. ಯೋಗ, ಧ್ಯಾನ, ಆಟೋಟ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಲಾಗುತ್ತದೆ.
ಶಿಕ್ಷಣ- ತರಬೇತಿ ವಿವರ:
ತಪಸ್ ಸಂಸ್ಥೆಯ ವತಿಯಿಂದ ಗಂಡು ಮಕ್ಕಳಿಗೆ 2 ವರ್ಷದ ಪಿಯುಸಿ ( ಸಿಬಿಎಸ್‌ಸಿ ಪಠ್ಯಕ್ರಮದಂತೆ) ಶಿಕ್ಷಣ ಹಾಗೂ ಐಐಟಿ- ಜೆಇಇ ತರಬೇತಿ ನೀಡಲಾಗುತ್ತದೆ. ಸಾಧನಾ ವತಿಯಿಂದ ಹೆಣ್ಣು ಮಕ್ಕಳಿಗೆ ನೀಟ್ ( ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಿಗೆ) ತರಬೇತಿ, 2 ವರ್ಷದ ಪಿಯುಸಿ (ಸಿಬಿಎಸ್‌ಸಿ) ಶಿಕ್ಷಣ ಹಾಗೂ 4 ವರ್ಷದ ಬಿಎಸ್‌ಸಿ- ಬಿಎಡ್‌ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಅರ್ಜಿ ಸಲ್ಲಿಸಲು ಕೆಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಅದರನ್ವಯ, ವಿದ್ಯಾರ್ಥಿಗಳು ಪ್ರಸ್ತುತ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. 9ನೆಯ ತರಗತಿಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷ ಮೀರಿರಬಾರದು.
ಅರ್ಹ ವಿದ್ಯಾರ್ಥಿಗಳು ಡಿಸೆೆಂಬರ್ 10, 2022ರ ಒಳಗೆ ಆನ್‍ಲೈನ್‍ ಮುಖೇನ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.
ವೆಬ್‍ಸೈಟ್: www.tapassaadhana.org
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 94812 01144/ 9844602529/ 7975913828

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!