Saturday, September 23, 2023

Latest Posts

ತುಮಕೂರು ಜಿಲ್ಲೆಗೆ ಅಧ್ಯಕ್ಷರ ನೇಮಕ

ದಿಗಂತ ವರದಿ ತುಮಕೂರು :

ತುಮಕೂರು ಜಿಲ್ಲೆಯನ್ನು ಎರಡು ಜಿಲ್ಲೆಗಳನ್ನಾಗಿ ವಿಭಜನೆ ಮಾಡಿರುವ ಬಿಜೆಪಿ ಎರಡೂ ಜಿಲ್ಲೆಗಳಿಗೂ ಅಧ್ಯಕ್ಷರನ್ನು ನೇಮಿಸಿದೆ.
ಸರ್ಕಾರ ಈ ಹಿಂದೆಯೇ ತುಮಕೂರು ಜಿಲ್ಲೆಯನ್ನು ಶೈಕ್ಷಣಿಕ ಉದ್ದೇಶಗಳಿಗೇ ಮಧುಗಿರಿ ಮತ್ತು ತುಮಕೂರು ಶೈಕ್ಷಣಿಕ ಜಿಲ್ಲೆಗಳನ್ನಾಗಿ ವಿಭಜನೆ ಮಾಡಿತ್ತು.
ಅದೇ ಮಾದರಿಯಲ್ಲಿಯೇ ಬಿಜೆಪಿಯೂ ಎರಡು ಜಿಲ್ಲೆಗಳನ್ನು ಘೋಷಿಸಿದೆ.
ತುಮಕೂರು ಜಿಲ್ಲಾ ಅಧ್ಯಕ್ಷರನ್ನಾಗಿ ಲಕ್ಷ್ಮೀಶ ಅವರನ್ನೂ,ಮಧುಗಿರಿ ಜಿಲ್ಲಾಧ್ಯಕ್ಷರನ್ನಾಗಿಶಿರಾ ತಾಲೂಕಿನ ಬೇವಿನಹಳ್ಳಿ ಮಂಜುನಾಥ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳೀನ ಕುಮಾರ್ ಕಟೀಲ್ ಅವರು ನೇಮಿಸಿದ್ದಾರೆ.
ತುಮಕೂರು ಜಿಲ್ಲಾ ವ್ಯಾಪ್ತಿಗೆ ತುಮಕೂರುನಗರ. ತುಮಕೂರು ಗ್ರಾಮಾಂತರ. ಕುಣಿಗಲ್. ಗುಬ್ಬಿ. ತಿಪಟೂರು ತುರುವೇಕೆರೆ. ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರಗಳು ಬಂದರೆ.ಮಧುಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಶಿರಾ.ಮಧುಗಿರಿ. ಕೊರಟಗೆರೆ. ಪಾವಗಡ ವಿಧಾನಸಭಾ ಕ್ಷೇತ್ರಗಳು ಬರಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!