Friday, June 2, 2023

Latest Posts

ನವಭಾರತ ನಿರ್ಮಾಣಕ್ಕೆ ಯುವಕರು ಪರಿವರ್ತನೆಯ ನೇತೃತ್ವ ಅಗತ್ಯ: ಸಚಿವ ಸುನಿಲ್‌ಕುಮಾರ್

ದಿಗಂತ ವರದಿ ಆದಿ ಚುಂಚನಗಿರಿ :

ಸ್ವಾಮಿ ವಿವೇಕಾನಂದರ ಕನಸಿನ ಭಾರತ, ಕಲಾಂ ಅವರ ಭವ್ಯಿದ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಪರಿಕಲ್ಪನೆಯ ನವಭಾರತ ನಿರ್ಮಾಣಕ್ಕೆ ಯುವಕರು ಪರಿವರ್ತನೆಯ ನೇತೃತ್ವ ವಹಿಸಿಕೊಳ್ಳಬೇಕು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಸಲಹೆ ನೀಡಿದರು.
ಆದಿ ಚುಂಚನಗಿರಿಯಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, , ಯುವ ಪ್ರತಿಭೆಗಳು ಬೆಳೆಯಬೇಕು. ಯುವಶಕ್ತಿ ರಾಷ್ಟ್ರಶಕ್ತಿಯಾಗಿ ನಿರ್ಮಾಣವಾಗಬೇಕು. ಆಗ ಮಾತ್ರ ದೇಶದಲ್ಲಿ ಹೊಸ ಮನ್ವಂತರ ಸೃಷ್ಟಿಯಾಗಲು ಸಾಧ್ಯ. ಯುವಕರು ಮನಸ್ಸು ಮಾಡಿದರೆ ಮಾತ್ರ ಸಾಧ್ಯ. ಯುವಕರು ಕೇವಲ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತರಾದರೆ ಪ್ರಯೋಜನವಿಲ್ಲ. ಸಮಾಜ ಕಟ್ಟುವಲ್ಲಿ ದೇಶ ನಿರ್ಮಾಣ ಕಾರ್ಯದಲ್ಲಿ ಯುವಕರು ತೊಡಗಿಸಿಕೊಳ್ಳಬೇಕು. ಎಲ್ಲ .ಕ್ಷೇತ್ರಗಳಲ್ಲೂ ಪರಿವರ್ತನೆಯಾಗಬೇಕು. ಅದರ ನೇತೃತ್ವವನ್ನು ಯುವಕರು ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮ ಗ್ರಾಮಗಳ ಯುವಕ ಸಂಘಗಳು ಸಂಕಲ್ಪ ಮಾಡಬೇಕು. ನವಭಾರತ ನಿರ್ಮಾಣ ಕಾರ್ಯಕ್ಕೆ ಎಲ್ಲರೂ ಒಮ್ಮನಸ್ಸಿನಿಂದ ಹೆಜ್ಜೆ ಇಟ್ಟು ಜಗತ್ತಿನಲ್ಲಿ ಭಾರತವನ್ನು ಎತ್ತರದ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದಾಗ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಹೊಸ ಅರ್ಥ ಬರುತ್ತದೆ ಎಂದು ನುಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!