ಕನ್ನಡ ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಸಂಸ್ಕೃತಿ ಇಲಾಖೆ ವ್ಯಾಪ್ತಿಯ 19 ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಡಾ.ಪುರುಷೋತ್ತ ಬಿಳಿ ಮಲೆ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಜೊತೆಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಡಾ.ಚನ್ನಪ್ಪ ಕಟ್ಟಿ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ವಿವಿಧ ಪ್ರಾಧಿಕಾರದ ಅಧ್ಯಕ್ಷ ಹಾಗೂ ಸದಸ್ಯರು ವಿವರಗಳು ಇಂತಿವೆ.

ಕನ್ನಡ ಪುಸ್ತಕ ಪ್ರಾಧಿಕಾರ – ಅಧ್ಯಕ್ಷರು ಮೈಸೂರು ಮಾನಸ

ಕರ್ನಾಟಕ ಸಾಹಿತ್ಯ ಅಕಾಡೆಮಿ- ಎಲ್ ಎನ್ ಮುಕುಂದರಾಜ್

ಕರ್ನಾಟಕ ನಾಟಕ ಅಕಾಡೆಮಿ- ಕೆವಿ ನಾಗರಾಜಮೂರ್ತಿ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ- ಕೃಪಾ ಫಡಕಿ

ಕರ್ನಾಟಕ ಶಿಲ್ಪ ಕಲಾ ಅಕಾಡಮಿ- ಎಂಸಿ ರಮೇಶ್

ಲಲಿತ ಕಲಾ ಅಕಾಡಮಿ- ಡಾ.ಪಸ ಕುಮಾರ್

ಯಕ್ಷಗಾನ ಅಕಾಡೆಮಿ- ತಲ್ಲೂರು ಶಿವರಾಂ ಶೆಟ್ಟಿ

ಜಾನಪದ ಅಕಾಡೆಮಿ- ಶಿವ ಪ್ರಸಾದ್ ಗೊಲ್ಲಹಳ್ಳಿ

ತುಳು ಸಾಹಿತ್ಯ ಅಕಾಡೆಮಿ- ತಾರಾನಾಥ ಗಟ್ಟಿ ಕಾಪಿಕಾಡ್

ಕೊಂಕಣಿ ಸಾಹಿತ್ಯ ಅಕಾಡೆಮಿ- ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್

ಬ್ಯಾರಿ ಸಾಹಿತ್ಯ ಅಕಾಡೆಮಿ- ಉಮರ್ ಯು ಎಚ್

ಅರೆ ಭಾಷಾ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ- ಸದಾನಂದ ಮಾವಜಿ

ಬಯಲಾಟ ಅಕಾಡೆಮಿ- ದುರ್ಗದಾಸ್

ಬಂಜಾರ ಅಕಾಡೆಮಿ- ಡಾಕ್ಟರ್‌ ಎಂ ಆರ್ ಗೋವಿಂದಸ್ವಾಮಿ

ರಂಗ ಸಮಾಜ- ಡಾ.ರಾಮಕೃಷ್ಣಯ್ಯ

ಕೊಡವ ಸಾಹಿತ್ಯ ಅಕಾಡೆಮಿ- ಅಜ್ಜಿನಕೊಂಡ ಮಹೇಶ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!