ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಮೊರಾದಾಬಾದ್‌ನ 36 ವರ್ಷದ ಮಹಿಳೆಯೊಬ್ಬರು ಸಂಭಾಲ್ ಜಿಲ್ಲೆಯಲ್ಲಿ ಇತ್ತೀಚೆಗೆ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ಸಂದರ್ಭ ನಡೆದ ಹಿಂಸಾಚಾರವನ್ನು ನಿರ್ವಹಿಸುವಲ್ಲಿ ಪೊಲೀಸರ ಪಾತ್ರವನ್ನು ಶ್ಲಾಘಿಸಿದ್ದು, ಇದರಿಂದ ಕೋಪಗೊಂಡ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ .
ಈ ಕುರಿತು ಮಹಿಳೆಯೋರ್ವರು ಅವರ ಪತಿ ಮತ್ತು ಅತ್ತೆಯ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದು, ಸಂಭಾಲ್‌ನಲ್ಲಿ ನಡೆದ ಹಿಂಸಾಚಾರದ ವಿಡಿಯೋಗಳನ್ನು ನೋಡದಂತೆ ಪತಿ ತನಗೆ ಎಚ್ಚರಿಕೆ ನೀಡಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಸಂಭಾಲ್‌ನಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಕಡಿವಾಣ ಹಾಕುವಲ್ಲಿ ಪೋಲೀಸರ ಪಾತ್ರ ಶ್ಲಾಘನೀಯ ಎಂದು ತನ್ನ ಕುಟುಂಬಕ್ಕೆ ಹೇಳಿದೆಎಂದು ಮಹಿಳೆ ಹೇಳಿದ್ದಾರೆ. ಆದರೆ ಈ ಹೇಳಿಕೆಯಿಂದ ಮಹಿಳೆಯ ಮನೆಯವರು ಕೋಪಗೊಂಡಿದ್ದು, ಆಕೆಯ ಪತಿ ತ್ರಿವಳಿ ತಲಾಖ್ ಅನ್ನು ಉಚ್ಚರಿಸಸು ಮೂಲಕ ಅವರ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ ಆದರೆ ಇದು ಮಹಿಳೆಯ ಎರಡನೇ ಮದುವೆಯಾಗಿದ್ದು, ಆಕೆ ತನ್ನ ಮೊದಲ ಪತಿಯಿಂದ 2021 ರಲ್ಲಿ ವಿಚ್ಛೇದನ ಪಡೆದಿದ್ದಳು.
ಮಹಿಳೆ ತನ್ನ ಎರಡನೇ ಪತಿಯೊಂದಿಗೆ ಸಮಸ್ಯೆಯನ್ನು ಪರಿಹರಿಸಲು ಗುರುವಾರ ಗುರುಗ್ರಾಮ್‌ಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಪತಿಯ ಕಚೇರಿಯಲ್ಲಿ ಅವನಿಗಾಗಿ ಕಾಯುತ್ತಿರುವಾಗ, ಸಂಭಾಲ್‌ನಲ್ಲಿನ ಹಿಂಸಾಚಾರದ ವೀಡಿಯೊವನ್ನು ಅವಳು ನೋಡಿದಳು ಮತ್ತು ಪೊಲೀಸರ ಕಾರ್ಯಗಳಿಗೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದಳು. ಆದರೆ ಆಕೆಯ ಪತಿ ಅವರು ವೀಡಿಯೊ ನೋಡುವುದನ್ನು ನೋಡಿದಾಗ, ಅವರು ಕೋಪಗೊಂಡು ಹಾಗೆ ಮಾಡದಂತೆ ಎಚ್ಚರಿಕೆ ನೀಡಿದರು.
ಈ ಘಟನೆಯನ್ನು ಮೊರಾದಾಬಾದ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸತ್ಪಾಲ್ ಅಂತಿಲ್ ಘಟನೆಯನ್ನು ಖಚಿತಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಮಹಿಳೆಯ ದೂರನ್ನು ಮಹಿಳಾ ಪೊಲೀಸ್ ಠಾಣೆಗೆ ರವಾನಿಸಲಾಗಿದೆ ಎಂದು ಅವರು ಹೇಳಿದರು. ಇನ್ನು ಭಾರತೀಯ ಕಾನೂನಿನ ಪ್ರಕಾರ, ತ್ರಿವಳಿ ತಲಾಖ್ ಅಪರಾಧವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೊರಾದಾಬಾದ್‌ನ ಮಹಿಳಾ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.