Friday, December 8, 2023

Latest Posts

ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ: ಐತಿಹಾಸಿಕ ಕ್ಷಣ ಎಂದ ಜೋಶಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ ನಾರೀ ಶಕ್ತಿ ವಂದನ್ ಅನಿಯಮ್ ಗೆ ಅನುಮೋದನೆ ದೊರೆತಿದ್ದು, ದೇಶದಲ್ಲಿಯೇ ಇದು ಐತಿಹಾಸಿಕವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಸಿಕ್ಕು ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಕೇಂದ್ರ ಸಚಿವರನ್ನು ಶುಕ್ರವಾರ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಸನ್ಮಾನಿಸಲಾಯಿತು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೇ. ೩೩ ರಷ್ಟು ಮೀಸಲಾತಿ ದೊರೆಯುತ್ತದೆ. ಇದರಿಂದ ಲೋಕಸಭೆಯಲ್ಲಿ ೧೮೦ ಹಾಗೂ ವಿಧಾನಸಭೆಯಲ್ಲಿ ೬೬ ಮಹಿಳೆಯರಿಗೆ ಅವಕಾಶ ಸಿಗಲಿದೆ ಎಂದರು.

ಜಿ. ೨೦ ಶೃಂಗ ಸಭೆ ಹಾಗೂ ಮಹಿಳಾ ಮೀಸಲಾತಿ ಸ್ವರ್ಣಾಕ್ಷರದಲ್ಲಿ ಬರೆದಿಡುವಂತಾಗಿವೆ. ಕಳೆದ ಹಲವು ದಶಕಗಳಿಂದ ಜಾರಿಯಾಗಬೇಕಿದ್ದ ಈ ಕಾಯ್ದೆ ರಾಜಕೀಯ ಹಿತಾಸಕ್ತಿಯಿಂದ ಹಾಗೇ ಉಳಿದಿತ್ತು. ಆದರೆ ಪ್ರಧಾನಿ ಮೋದಿ ಅವರ ಹಾಗೂ ಕೇಂದ್ರ ಸರ್ಕಾರ ಇಚ್ಛಾಶಕ್ತಿಯಿಂದ ಸರ್ವ ಸಮ್ಮತಿ ದೊರೆತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!