ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡಿಗರ ಹೃದಯದಲ್ಲಿ ಖಾಯಂ ನಿವಾಸಿಯಾಗಿರುವ ನಟ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ ಐದು ವರ್ಷಗಳು ತುಂಬಿವೆ. ಪುನೀತ್ ಪುಣ್ಯಸ್ಮರಣೆಯಂದು ಸಿಎಂ ಡಿ.ಕೆ. ಶಿವಕುಮಾರ್ ಭಾವನಾತ್ಮಕ ಟ್ವೀಟ್ ಒಂದನ್ನು ಮಾಡಿದ್ದಾರೆ.
ತಮ್ಮ ಮುಗ್ಧ ನಗು, ವಿನಯವಂತಿಕೆ ಮತ್ತು ಅಭಿನಯದಿಂದ ಕರುನಾಡಿನ ಮನೆಮನೆಯ ಕಣ್ಮಣಿಯಾಗಿ ಬೆಳೆದು, ಇಂದಿಗೂ ಕೋಟ್ಯಂತರ ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿರುವವರು ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರು. ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದು, ನಾಯಕನಾಗಿ ಕನ್ನಡ ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಅಪ್ಪು ಅವರ ಕಲಾ ಪ್ರತಿಭೆ ಅದ್ವಿತೀಯ. ತೆರೆಯ ಮೇಲೆ ಸೂಪರ್ಸ್ಟಾರ್ ಆಗಿದ್ದರೂ, ತೆರೆಯ ಹಿಂದೆ ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿ ಅವರು ಬದುಕಿದ ರೀತಿ ಎಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ.
ನಟ ಪುನೀತ್ ಅವರ ಅಗಲಿಕೆಯ ನೋವನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿರುವ ಅಭಿಮಾನಿಗಳು ಅಪ್ಪು ಹೆಸರಿನಲ್ಲಿ ದಾನ, ರಕ್ತದಾನ, ಅನ್ನದಾಸೋಹ ಇನ್ನಿತರ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ರಾಜಕಾರಣಿಗಳು, ಸಿನಿ ಗಣ್ಯರು ಅಪ್ಪು ಬಗೆಗಿನ ಮಾತುಗಳನ್ನು, ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಪ್ಪು ಅಜರಾಮರ ಎಂದು ತಮ್ಮ ಪ್ರೀತಿಯನ್ನು ತೋರಿಸುತ್ತಿದ್ದಾರೆ.



