ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೂ ಮುಸ್ಲಿಮರ ಧಾರ್ಮಿಕ ಸ್ಥಳವಾಗಿರುವ ಶಿವಮೊಗ್ಗದ ಹಣಗೆರೆಕಟ್ಟೆಯಲ್ಲಿ ಪ್ಯಾಲೆಸ್ತೀನ್ ಪರ ಫ್ಲೆಕ್ಸ್ ಹಾಕಲಾಗಿದೆ.
ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯಲ್ಲಿ ಯಾವುದೇ ಬೇಧವಿಲ್ಲದೆ ಎಲ್ಲ ಧರ್ಮದವರು ಬಾಳ್ವೆ ನಡೆಸುತ್ತಿದ್ದಾರೆ. ಆದರೆ ಇದೀಗ ಪ್ಯಾಲೆಸ್ತೀನ್ ಪರ ಫ್ಲೆಕ್ಸ್‌ನ್ನು ತೆಗೆಯಿರಿ ಹಾಗೂ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪ್ರಕರಣ ಸಂಬಂಧ ಶಿವಮೊಗ್ಗ ಎಸ್ಪಿಯವರಿಗೆ ಪತ್ರ ಬರೆದಿದ್ದಾರೆ. ಸದ್ಯ ಮುಂಜಾಗ್ರತ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.
ಮೊನ್ನೆ ಈದ್ ಮಿಲಾದ್ ಹಬ್ಬ ಹಿನ್ನೆಲೆ ಹಣಗೆರೆ ಕಟ್ಟೆಯ ದರ್ಗಾದ ಬಳಿ ಫ್ಲೆಕ್ಸ್ ಅಳವಡಿಸಲಾಗಿತ್ತು. ಆದರೆ ಹಬ್ಬದ ಸಂಬಂಧ ಹೊರತುಪಡಿಸಿ ವಿ ಸ್ಟ್ಯಾಂಡ್ ವಿತ್ ಪ್ಯಾಲೆಸ್ತೀನ್ ಎಂಬ ಫ್ಲೆಕ್ಸ್ ಅಳವಡಿಸಲಾಗಿದೆ. ಪ್ಯಾಲೆಸ್ತೀನ್ ಪರ ಪ್ಲೆಕ್ಸ್ ಹಾಕಿದ್ದಕ್ಕೆ ಹಿಂದು ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.