ಇನ್ನೊಂದು ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೆ ತೆತ್ತ ಅರ್ಚನಾ ಕಾಮತ್

ಹೊಸದಿಗಂತ ವರದಿ, ಮಂಗಳೂರು

ಅಂಗದಾನ ಪ್ರಕ್ರಿಯೆ ಸಂದರ್ಭ ಆರೋಗ್ಯದಲ್ಲಿ ಏರಿಳಿತವಾಗಿ ಯುವತಿಯೊಬ್ಬರು ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಮಂಗಳೂರಿನ ಕರಂಗಲ್ಪಾಡಿಯಲ್ಲಿ ನಡೆದಿದೆ.

ಮಂಗಳೂರಿನ ಪ್ರಸಿದ್ದ ಲೆಕ್ಕಪರಿಶೋಧಕ ಚೇತನ್ ಕಾಮತ್ ಅವರ ಪತ್ನಿ, ವೃತ್ತಿಯಲ್ಲಿ ಉಪನ್ಯಾಸಕಿಯಾದ ಅರ್ಚನಾ ಕಾಮತ್(33)ಮೃತ ದುರ್ದೈವಿ.

ಲೆಕ್ಕಪರಿಶೋಧಕ ಚೇತನ್ ಕಾಮತ್ ಅವರ ತಂದೆ ಸಿ.ಎ ಸತೀಶ್ ಕಾಮತ್ ಅವರ ಸಹೋದರನ ಪತ್ನಿಗೆ ಲಿವರ್ ಕಾಯಿಲೆ ಇದ್ದ ಕಾರಣ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಲಿವರ್ ಕಸಿ ಮೂಲಕ ಚಿಕಿತ್ಸೆ ನೀಡಲು ನಿರ್ಧರಿಸಲಾಗಿತ್ತು. ಹಲವಾರು ಡೋನರ್‌ಗಳ ಲಿವರ್ ಮ್ಯಾಚ್ ಆಗದ ಕಾರಣ ಚಿಕಿತ್ಸೆಗೆ ಹಿನ್ನಡೆಯಾಗುತ್ತಿತ್ತು. ಈ ವೇಳೆ ಅರ್ಚನಾ ಕಾಮತ್ ಅವರ ಲಿವರ್ ಅರ್ಗನ್ ಮ್ಯಾಚ್ ಆಗಿದ್ದ ಕಾರಣ ಅರ್ಚನಾ ಸಹಿತ ಕುಟುಂಬಸ್ಥರು ಲಿವರ್ ಡೊನೆಷನ್‌ಗೆ ನಿರ್ದರಿಸಿದ್ದರು. ಚಿಕಿತ್ಸಾಪೂರ್ವ ಪ್ರಕ್ರಿಯೆಗಳನ್ನು ಪೂರ್ಣ ಗೊಳಿಸಿದ ನಂತರ 12 ದಿನದ ಮೊದಲು ಲಿವರ್ ಟ್ರಾನ್ಸಫಾರ್ ಮಾಡಲಾಗಿತ್ತು. ಲಿವರ್ ಡೋನರ್ ಅರ್ಚನಾ ಕಾಮತ್ ಆರೋಗ್ಯದಿಂದಿದ್ದು, 3 ದಿನಗಳ ಹಿಂದೆ ಅಪೋಲೊ ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ಈ ಮಧ್ಯೆ ಅರ್ಚನಾ ಕಾಮತ್ ಅವರ ಆರೋಗ್ಯದಲ್ಲಿ ಏರಿಳಿತವಾಗಿದ್ದರಿಂದ ಮತ್ತೆ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆದರೆ ಬಹುಅಂಗಾಂಗ ವೈಪಲ್ಯಗೊಂಡು ಮೃತಪಟ್ಟಿರುವುದಾಗಿ ಭಾನುವಾರ ಆಸ್ಪತ್ರೆ ಮೂಲಗಳು ತಿಳಿಸಿದೆ.

ಮೃತ ಶರೀರವನ್ನು ಕರಂಗಲ್ಪಾಡಿಯಯ ನಿವಾಸಕ್ಕೆ ತಂದು ವಿಧಿವಿದಾನ ನೆರವೇರಿಸಿದ ನಂತರ ಕೋಟೆಶ್ವರದಲ್ಲಿ ಕುಟಂಬಸ್ಥರ ಸಮ್ಮುಖದಲ್ಲಿ ಅಂತಿಮ ಕಾರ್ಯ ನೆರವೇರಿಸಲಾಗಿದೆ.

ಅರ್ಚನಾ ಕಾಮತ್ ಅವರ ಸಾವಿಗೆ ಸಂಸದ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!