ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದ ಹೇಮಾ ಸಮಿತಿ ಅಂತೆ ಇದೀಗ ಕನ್ನಡದಲ್ಲೂ ಅದೇ ರೀತಿ ಸಮಿತಿ ಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು ಸಭೆ ಕರೆಯಲಾಗಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾತನಾಡಿ, ಚಿತ್ರರಂಗಕ್ಕೆ ಹೆಣ್ಣು ಮಕ್ಕಳು ಬರುತ್ತಾರೆ ಎಂದರೆ ತಂದೆ-ತಾಯಿ ಸುಲಭದಲ್ಲಿ ಕಳುಹಿಸಬೇಕು. ಆ ರೀತಿ ಚಿತ್ರರಂಗ ಆಗಬೇಕು. ಎಲ್ಲರೂ ಡಾಕ್ಟರ್ ಆಗಿ, ಇಂಜಿನಿಯರ್ ಆಗಿ ಎನ್ನುತ್ತಾರೆ. ಆದರೆ, ಕೆಲವೇ ಕೆಲವರು ಮಾತ್ರ ನಟನೆಗೆ ಹೋಗಿ ಎಂದು ಹೇಳುತ್ತಾರೆ. ಚಿತ್ರರಂಗದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿ ಇರ್ತಾರಾ ಎಂಬ ಪ್ರಶ್ನೆ ಮೂಡುವಂತೆ ಆಗಿದೆ ಎಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಪಾಶ್ ಕಮಿಟಿ ಮಾಡಲಾಗುತ್ತಿದೆ. ವಾಣಿಜ್ಯ ಚಿತ್ರರಂಗಕ್ಕೆ ಪತ್ರ ಬರೆದಿದ್ದೇವೆ. ಇವತ್ತು ಮೀಟಿಂಗ್ಗೆ ಬಹಳ ಕಡಿಮೆ ನಟಿಯರು ಬಂದಿದ್ದಾರೆ. ಹೊರದೇಶದಲ್ಲಿ ಪ್ರೋಗ್ರಾಂ (ಸೈಮಾ) ಇತ್ತು. ಹೀಗಾಗಿ, ಅಲ್ಲಿಗೆ ಹೋಗಿದ್ದಾರೆ ಎಂದರು. ನನಗೆ ಅನಾರೋಗ್ಯ ಆಗಿದೆ. ಆದರೂ ಬಂದಿದ್ದೇನೆ. ಮುಂದಿನ ಸಭೆಯಲ್ಲಿ ಎಲ್ಲರೂ ಬರುವಂತೆ ಆಗಬೇಕು ಎಂದರು .
ಕಮಿಟಿ ಹೇಗೆ ಇರಬೇಕು ಎನ್ನುವ ಕುರಿತು ಕಾನೂನು ಇದೆ. ಅದೇ ರೀತಿಯಲ್ಲಿ ಸಮಿತಿ ರಚನೆ ಆಗಲಿದೆ. ಇದು ನಟಿಯರಿಗೆ ಫ್ಯಾಮಿಲಿ. ನಟಿಯರು ಸಿನಿಮಾದಲ್ಲಿ ನಟಿಸಬೇಕು ಎಂದಾಗ 17 ಪಾಯಿಂಟ್ಸ್ ಇದೆ. ಯಾವ ಯಾವ ಫೆಸೆಲಿಟಿ ನೀಡಬೇಕು ಎಂಬುದರ ಉಲ್ಲೇಖ ಇದೆ. ಪಾಶ್ ಕಮಿಟಿ ಇರುತ್ತದೆ. ಸರ್ಕಾರದ ಗೆಜೆಟ್ನಲ್ಲಿ ಈ ಸಮಿತಿ ಬರುತ್ತದೆ. ದೂರು ಬಂದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.