August 3, 2026
Monday, August 3, 2026
spot_img

ಒಂದೊಳ್ಳೆ ಸಿನಿಮಾ ತುಳಿಯೋಕೆ ಟ್ರೈ ಮಾಡ್ತಿದ್ಯಾ ಕಾಣದ ಕೈಗಳು? ಮದರ್‌ಪ್ರಾಮಿಸ್‌ ರೇಟಿಂಗ್‌ ಡೌನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಗೆಲ್ಲಾ ಜನರು ರೇಟಿಂಗ್‌ ನೋಡಿಯೇ ಸಿನಿಮಾ ಥಿಯೇಟರ್‌ಗೆ ಕಾಲಿಡ್ತಾರೆ. ಎಷ್ಟೊಂದು ಕೆಟ್ಟ ಸಿನಿಮಾಗಳಿಗೆ ಒಳ್ಳೆ ರೇಟಿಂಗ್‌ ಇದ್ರೂ ಜನ ಹೋಗ್ತಾರೆ. ಇನ್ನು ಎಷ್ಟೊಂದು ಒಳ್ಳೆ ಸಿನಿಮಾಗಳಿಗೆ ಕೆಟ್ಟ ರೇಟಿಂಗ್‌ ಇದ್ರೆ ಫಿಲಂಗೆ ಉಳಿಗಾಲವಿಲ್ಲ. ಇದೀಗ ಮದರ್‌ ಪ್ರಾಮಿಸ್‌ ಸಿನಿಮಾದ್ದೂ ಇದೇ ಕಥೆ!

ಜನ ರೇಟಿಂಗ್‌ಗಾಗಿ ಬುಕ್‌ಮೈಶೋ ಅಪ್ಲಿಕೇಷನ್‌ ನೋಡುತ್ತಾರೆ. ಅಲ್ಲಿಯೇ ಟಿಕೆಟ್‌ ಬುಕ್‌ ಮಾಡುತ್ತಾರೆ. ಆದರೆ ಡಾಲಿ ಧನಂಜಯ ಪ್ರೊಡಕ್ಷನ್‌ನ ಮದರ್‌ ಪ್ರಾಮಿಸ್‌ ಸಿನಿಮಾಗೆ ರೇಟಿಂಗ್ಸ್‌ ಸಮಸ್ಯೆ ಆಗಿದೆ. ಕೆಲವರು ದುರುದ್ದೇಶದಿಂದ ಸಿನಿಮಾಗೆ ಕೆಟ್ಟ ರೇಟಿಂಗ್‌ ಕೊಡ್ತಿದ್ದಾರೆ. ಸಟಲ್‌ ಕಾಮಿಡಿ ಇರುವ ಈ ಸಿನಿಮಾ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗ್ತಿದೆ. ಥಿಯೇಟರ್‌ ತುಂಬೆಲ್ಲಾ ನಗು ಸದ್ದು ಕೇಳ್ತಿದೆ. ಆದರೆ ರೇಟಿಂಗ್ಸ್‌ ಮಾತ್ರ ಕಡಿಮೆ ಇದೆ. ಈ ಬಗ್ಗೆ ಡಾಲಿ ಧನಂಜಯ ಪೋಸ್ಟ್‌ ಒಂದನ್ನು ಮಾಡಿದ್ದಾರೆ.

ಮದರ್‌ ಪ್ರಾಮಿಸ್‌ ಸಿನಿಮಾ ಹಲವರಿಗೆ ಇಷ್ಟವಾಗ್ತಿದೆ. ಕೆಲವೊಬ್ಬರಿಗೆ ಇಷ್ಟವಾಗಿಲ್ಲ. ಅದು ಒಕೆ ಅದನ್ನು ಒಪ್ಪಿಕೊಳ್ಳೋಣ. ಕ್ರಿಟಿಕ್ಸ್‌ಗಳಿಗೆ ಸ್ವಾಗತ. ಆದರೆ ಬೇಕು ಅಂತಲೇ ಚೆನ್ನಾಗಿರುವ ಸಿನಿಮಾ ಒಂದನ್ನು ಸಾಯಿಸೋಕೆ ಒಂದು ಹೇಟ್ರೆಡ್‌ ಕಾಂಪೇನ್‌ ಶುರು ಮಾಡಿದ್ದಾರೆ. ಇದು ಚಿತ್ರರಂಗಕ್ಕೆ ಒಳ್ಳೆಯದಲ್ಲ. ಒಬ್ರು ಮಾಡಿದ್ರು ಅಂತ ಎಲ್ರೂ ಮಾಡೋಕೆ ಶುರು ಮಾಡಿದ್ರೆ ಜಗತ್ತು ಏನಾಗಬೇಡ? ಇದೇ ಕಾರಣಕ್ಕೆ ಎಲ್ಲ ನಿರ್ಮಾಪಕರು ಕೋರ್ಟ್‌ನಿಂದ ಆರ್ಡರ್‌ ತಂದು ರೇಟಿಂಗ್ಸ್‌ ಡಿಸೇಬಲ್‌ ಮಾಡ್ತಾರೆ. ಆದರೆ ಹೀಗೆ ಮಾಡಿದರೆ ಪ್ರಾಮಾಣಿಕ ವಿಮರ್ಶೆಗಳಿಗೂ ತಡೆಯೊಡ್ಡಿದಂತೆ ಆಗುತ್ತದೆ. ಒಂದೊಳ್ಳೆ ಆರೋಗ್ಯಕರ ವಾತಾವರಣ ಕ್ರಿಯೇಟ್‌ ಆಗ್ಬೇಕು. ಕೆಟ್ಟ ಕಲ್ಚರ್‌ ಕೊನೆಯಾಗಬೇಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !