March 7, 2026
Saturday, March 7, 2026
spot_img

🌞 SKIN CARE | ಮೈ ಕೈ ಎಲ್ಲಾ ಒಡೆದು ಬರಡುಭೂಮಿಯಂತೆ ಕಾಣಿಸ್ತಾ ಇದೆಯಾ? ಹೀಗೆ ಮಾಡಿನೋಡಿ

ಭರ್ಜರಿ ಬಿಸಿಲು ಆರಂಭವಾಗಿದೆ. ಸ್ನಾನ ಮಾಡಿ ಬಂದ ತಕ್ಷಣ ಬಾಡಿ ಲೋಷನ್‌ ಹಚ್ಚದೇ ಹೋದರೆ ಚರ್ಮ ಒಡೆದು ಬರಡುಭೂಮಿಯಂತೆ ಕಾಣಿಸುತ್ತದೆ. ಇನ್ನು ಮನೆಕೆಲಸ ಅಥವಾ ಆಫೀಸ್‌ ಕೆಲಸ ಮಾಡುವ ಮಹಿಳೆಯರ ಅಂಗೈಗಳು ಕೂಡ ಒಡೆದು ಆಗಾಗ ಹ್ಯಾಂಡ್‌ ಕ್ರೀಂ ಹಚ್ಚುವಂತೆ ಆಗುತ್ತಿದ್ಯಾ? ಸೂರ್ಯನ ಬಿಸಿಲಿಗೆ ಚರ್ಮ ಒಣಗಿಹೋಗುತ್ತದೆ. ನೀರಿನ ಅಂಶ ಆವಿಯಾಗುತ್ತದೆ. ಈ ಸೀಸನ್‌ಗೆ ಎಕ್ಸ್ಟ್ರಾ ಸ್ಕಿನ್‌ ಕೇರ್‌ ಬೇಕು, ಹೇಗೆ ನೋಡಿ..

ದಿನಕ್ಕೆರಡು ಬಾರಿ ಮಿಸ್‌ ಮಾಡದೇ ಮುಖ ತೊಳೆಯಿರಿ, ವಾರಕ್ಕೊಮ್ಮೆ ಸ್ಕ್ರಬ್‌ ಮಾಡಿ, ತಿಂಗಳಿಗೊಮ್ಮೆ ಕ್ಲೀನ್‌ ಅಪ್‌ ಹಾಗೂ ಡೀ ಟ್ಯಾನ್‌ ಮಾಡಿಸಿಕೊಳ್ಳಿ.

ಬರೀ ಹೊರಗಿನಿಂದ ರಾಶಿ ಕ್ರೀಂ ಹಚ್ಚಿದ್ರೆ ಉಪಯೋಗ ಇಲ್ಲ, ಜಾಸ್ತಿ ನೀರು, ಕೆರಟಿನ್‌ ಸಪ್ಲಿಮೆಂಟ್ಸ್‌ ತಗೊಳ್ಳಿ

ಅತಿಯಾಗಿ ಮೇಕಪ್‌ ಹಾಕಬೇಡಿ, ಚರ್ಮಕ್ಕೆ ಉಸಿರಾಡಲು ಬಿಡಿ

ಮುಖ ತೊಳೆದ ನಂತರ ಒಂದು ನಿಮಿಷವೂ ವೇಸ್ಟ್‌ ಮಾಡದೇ ಮಾಯಿಶ್ಚರೈಸರ್‌ ಹಚ್ಚಿ. ಹೊರಗೆ ಹೋಗುವಾಗ ಸನ್‌ಸ್ಕ್ರೀನ್‌ ಹಚ್ಚಿ.

ಐಲಿಡ್ಸ್‌ನಲ್ಲಿ ತೆಳುವಾದ ಚರ್ಮ ಇದೆ. ಹೀಗಾಗಿ ಹೊರಗೆ ಹೋಗುವಾಗ ತಪ್ಪದೇ ಸನ್‌ಗ್ಲಾಸಸ್‌ ಬಳಕೆ ಮಾಡಿ. ತುಟಿ ಹಾಗೂ ಕಿವಿಗಳಿಗೂ ಸನ್‌ಸ್ಕ್ರೀನ್‌ ಹಚ್ಚಿ.

ಆಂಟಿಆಕ್ಸಿಡೆಂಟ್ಸ್‌ ಹೆಚ್ಚಾಗಿರುವ ತರಕಾರಿಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ.

ರಾತ್ರಿ ಮಲಗುವಾಗ ಮುಖವನ್ನು ತೊಳೆದು ಮಾಯಿಶ್ಚರೈಸರ್‌ ಹಚ್ಚೋದು ಮರೆಯಬೇಡಿ.

ಬೇಸಿಗೆಯಲ್ಲಿ ಯಾವುದೇ ಬ್ಯೂಟಿ ಪ್ರಾಡಕ್ಟ್ಸ್‌ ಬದಲಾವಣೆ ಬೇಡ. ಫ್ರೀ ಆಗಿ ಇದ್ದಾಗ ಹೈಡ್ರೇಟಿಂಗ್‌ ಮಾಸ್ಕ್‌ ಹಾಕಿಕೊಳ್ಳಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !