ಪ್ರಜ್ವಲ್ ರೇವಣ್ಣ ವಿಡಿಯೋಗಳು ಲೀಕ್ ಆಗಿದ್ದೇಗೆ? ಯಾರು ಮಾಡಿದ್ರು? ಇಲ್ಲಿದೆ ಸ್ಪೋಟಕ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ಇದೀಗ ಎಸ್‌ಐಟಿ ಪ್ರಕರಣದ ತನಿಖೆ ನಡೆಸಿದೆ. ಹಾಗಾದರೆ ಈ ವಿಡಿಯೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆಯೇ? ಮಾಡಿದ್ದೂ ಯಾರು ಎಂಬ ಚರ್ಚೆ ಶುರುವಾಗಿದ್ದು, ಈಗ ವಿಡಿಯೋ ಸೋರಿಕೆಗೆ ಕಾರಣವನ್ನು ಹೊಳೆ ನರಸೀಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ವಕೀಲ ದೇವರಾಜೇಗೌಡ ಬಹಿರಂಗಪಡಿಸಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳಿಗೆ ಉತ್ತರಿಸಿದ ದೇವರಾಜೇಗೌಡ, ಈ ವಿಡಿಯೋ ಸಮಸ್ಯೆ 2023ರಲ್ಲೇ ಇದೆ.ಆದರೆ, ಪ್ರಜ್ವಲ್ ರೇವಣ್ಣ ವಿಚಾರಣೆಯಿಂದ ವಿರಾಮ ಪಡೆದರು. ಈ ಹಂತದಲ್ಲಿ ಅವರ ಆಗಿನ ಚಾಲಕ ಕಾರ್ತಿಕ್ ಕೂಡ ಸ್ಟೇ ಪಡೆದಿದ್ದರು.

ಈ ವೇಳೆ ಕಾರ್ತಿಕ್ ನನ್ನ ಬಳಿಗೆ ಬಂದು ವಕಾಲತ್ತು ಹಾಕಿ ಎಂದಿದ್ದ, ಈ ವೇಳೆ ಪ್ರಜ್ವಲ್ ರೇವಣ್ಣನ ವಿಡಿಯೋಗಳನ್ನು ನೋಡಿದ್ದೆ ಎಂದು ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!