ಮಳೆಯ ವಾತಾವರಣಕ್ಕೆ ಮಕ್ಕಳಿಗೆ ಶೀತ ಆಗಿದ್ಯಾ? ಈ ಮನೆಮದ್ದುಗಳು ಸಹಾಯ ಮಾಡಬಹುದು..
ಈಗಿರುವ ವಾತಾವರಣಕ್ಕೆ ದೊಡ್ಡವರೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಹಾಗೆ ಮಕ್ಕಳು ಕೂಡ ಆರಾಮಿಲ್ಲದೆ ಶಾಲೆ ತಪ್ಪಿಸುತ್ತಿದ್ದಾರೆ. ಸಣ್ಣದಾಗಿ ಆರಂಭವಾದ ಶೀತವನ್ನು ಈ ರೀತಿ ಓಡಿಸಿ..
- ಒಂದು ಸ್ಪೂನ್ ಜೇನುತುಪ್ಪ ತಿನ್ನಿಸಿ
- ಘನ ಆಹಾರಕ್ಕಿಂತ ಹೆಚ್ಚು ದ್ರವಾಹಾರ ನೀಡಿ.
- ಮೂಗಿಗೆ ಉಪ್ಪು ನೀರು ಸ್ಪ್ರೇ ಮಾಡಿ
- ಸ್ನಾನ ಮಾಡಿಸದೆ ಸ್ಪಾಂಜ್ ಬಾತ್ ನೀಡಿ
- ತಲೆದಿಂಬು ಹಾಕಿ ಮಲಗಿಸಿ
- ಏಲಕ್ಕಿ, ಲವಂಗ ಸುಟ್ಟು ಅದನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಿಸಿ
- ಬಜೆ ಹಾಗೂ ಕಾಳುಮೆಣಸು ಜೇನುತುಪ್ಪದಲ್ಲಿ ತೇಯ್ದು ತಿನ್ನಿಸಿ
- ಬೆಚ್ಚಗಿನ ಟೋಪಿ, ಸ್ವೆಟರ್ ಹಾಕುವುದು ಮರೆಯಬೇಡಿ.
(ಈ ಎಲ್ಲ ಸಲಹೆಗಳನ್ನು ಅಂತರ್ಜಾಲವನ್ನು ಅನುಸರಿಸಿ ಬರೆಯಲಾಗಿದೆ. ಥಂಡಿ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸಿ)