Tuesday, August 9, 2022

Latest Posts

ಭಾರತದಲ್ಲಿ ಬಿಸಿನೆಸ್ ಕಟ್ಟುತ್ತಿರೋರು ಉದ್ಯಮಿಗಳ ಮಕ್ಕಳು, ಬಿಸಿನೆಸ್ ಡಿಗ್ರಿ ಓದಿದವರು ಮಾತ್ರವಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಉದ್ಯಮಶೀಲತೆಯ ಮನೋಭಾವ ಗಟ್ಟಿಗೊಳ್ಳುತ್ತಿದೆಯೇ? ಹೌದು ಎಂದಾದರೆ ಅದು ಯಾವ ರೀತಿ? ಉದ್ಯಮಿಗಳಾಗುವ ಹುಮ್ಮಸ್ಸು ಯಾರಲ್ಲೆಲ್ಲ ಜಾಗೃತಗೊಳ್ಳುತ್ತಿದೆ? ಅದು ಯಾವುದಾದರೂ ಒಂದು ವರ್ಗಕ್ಕೆ ಸೀಮಿತವಾ? ಇವಕ್ಕೆಲ್ಲ ‘ಶಾರ್ಕ್ ಟ್ಯಾಂಕ್ ಇಂಡಿಯಾ’ ರಿಯಾಲಿಟಿ ಟಿವಿ ಕಾರ್ಯಕ್ರಮದಲ್ಲಿ ಚಿತ್ರಣವೊಂದು ಸಿಕ್ಕಿದೆ.
‘ಶಾರ್ಕ್ ಟ್ಯಾಂಕ್ ಇಂಡಿಯಾ’ ದಲ್ಲಿ ಶಾರ್ಕ್ ಗಳೆಂದು ಗುರುತಿಸಲಾಗಿರುವ ಬಹುಕೋಟಿ ದುಡಿಮೆಯ ಉದ್ಯಮಿಗಳೆದುರು ನವೋದ್ದಿಮೆ ಸ್ಥಾಪಿಸಿರುವವರು ತಮ್ಮ ಐಡಿಯಾ ಪ್ರಸ್ತುತಪಡಿಸಿ ಫಂಡ್ ಕೇಳುತ್ತಾರೆ.
ಇದರಲ್ಲಿ ಒಬ್ಬ ಶಾರ್ಕ್ ಆಗಿ ಪಾಲ್ಗೊಂಡಿದ್ದ ಶಾದಿ ಡಾಟ್ ಕಾಂನ ಸ್ಥಾಪಕ ಮತ್ತು ಸಿಇಒ ಅನುಪಮ್ ಮಿತ್ತಲ್ ಲಿಂಕ್‌ಡಿನ್‌ನಲ್ಲಿ ಪೋಸ್ಟ್ ಒಂದರಲ್ಲಿ ಕಾರ್ಯಕ್ರಮವು ಉದ್ದಿಮೆ ವಿಷಯದಲ್ಲಿ ಕಾರ್ಯಕ್ರಮ ತೋರಿಸಿರುವ ಟ್ರೆಂಡ್ ಗಳನ್ನು ಪಟ್ಟಿ ಮಾಡಿದೆ.

• ಕಾರ್ಯಕ್ರಮದಲ್ಲಿ ಐಡಿಯಾ ಪಿಚ್ ಮಾಡಿದ ಮೂರನೇ ಒಂದು ಭಾಗದಷ್ಟು ಜನರು ದೊಡ್ಡ ನಗರಗಳಿಂದ ಬಂದವರಲ್ಲ.
• ಹೆಚ್ಚಿನ ಸ್ಪರ್ಧಿಗಳು ದೊಡ್ಡ ಸಂಸ್ಥೆಗಳಿಂದ ಬಂದವರಲ್ಲ ಮತ್ತು ಕೇವಲ 7 ಪ್ರತಿಶತದಷ್ಟು ಜನರು ಮಾತ್ರ ಐಐಟಿ ಅಥವಾ ಐಐಎಂ ಹಿನ್ನೆಲೆ ಹೊಂದಿದವರು.
• 22 ಪ್ರತಿಶತ ಪಿಚರ್‌ಗಳು 25 ವರ್ಷದ ಒಳಗಿನವರು
• ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಪಿಚ್ ಮಾಡಿರುವ ಐಡಿಯಾಗಳಲ್ಲಿ ಶೇ.18ರಷ್ಟು ಉದ್ಯಮ ದಂಪತಿ ನಡೆಸುತ್ತಿರುವುದು.
• ಶೇ.34ರಷ್ಟು ಕುಟುಂಬ ನಡೆಸುತ್ತಿರುವುದು
• ಶೇ.48 ರಷ್ಟು ಕಂಪನಿಗಳು ಮಹಿಳಾ ಸಹ ಸಂಸ್ಥಾಪಕರನ್ನು ಹೊಂದಿವೆ.
• ಸುಮಾರು 40 ಪ್ರತಿಶತ ಕಂಪನಿಗಳು ಹುಟ್ಟಿದ್ದೇ ಕೊರೋನಾ ಕಷ್ಟಕಾಲದಲ್ಲಿ.
• ಶೇ.70 ರಷ್ಟು ಕಂಪನಿಗಳ ಬಳಿ ಫಂಡಿಂಗ್ ಇರಲಿಲ್ಲ

ಕಾರ್ಯಕ್ರಮದ ಕೆಲ ಡೇಟಾ ಹಂಚಿಕೊಂಡ ಮಿತ್ತಲ್ ಅವರು, ಈ ಕಾರ್ಯಕ್ರಮಕ್ಕೆ ಉದ್ಯಮಶೀಲತೆಯನ್ನು ಮನಮೋಹಕ ಮತ್ತು ಆಕರ್ಷಕ ಮಾಡುವ ಸಾಮರ್ಥ್ಯ ಇದೆ ಎಂದಿದ್ದಾರೆ. ಯಾವುದೇ ಹಿನ್ನೆಲೆ, ಶಿಕ್ಷಣ, ಲಿಂಗವನ್ನು ಲೆಕ್ಕಿಸದೇ ಯಾರೂ ಕೂಡ ದೊಡ್ಡ ಕಂಪನಿಯನ್ನು ಕಟ್ಟಬಹುದು ಎನ್ನುವ ನಂಬಿಕೆಯನ್ನು ಈ ಕಾರ್ಯಕ್ರಮ ನೀಡುತ್ತಿದೆ. ಹಾಡು ಮತ್ತು ನೃತ್ಯದ ಕಾರ್ಯಕ್ರಮಗಳೇ ಎಲ್ಲೆಡೆ ತುಂಬಿರುವಾದ ಈ ರೀತಿ ಕಾರ್ಯಕ್ರಮಗಳು ವಿಭಿನ್ನವಾಗಿ ನಿಲ್ಲುತ್ತವೆ. ಶಾರ್ಕ್ ಟ್ಯಾಂಕ್‌ನಂಥ ಕಾರ್ಯಕ್ರಮದಿಂದ ಮಕ್ಕಳು ಕೂಡ ನೋಡಿ ಕಲಿಯಬಹುದು. ಈ ಕಾರ್ಯಕ್ರಮದಿಂದ ಅವರಿಗೂ ಸ್ಫೂರ್ತಿ ಸಿಗುತ್ತದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss