ಜಹಾಂಗೀರ್ಪುರಿ ಮುಸ್ಲಿಮರು ಇನ್ನೊಂದು ದಂಗೆಗೆ ತಯಾರಾಗ್ತಿದಾರಾ? ಸಂಶಯ ಎಬ್ಬಿಸಿದೆ ಮಸೀದಿಯ ಈ ನಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಜಹಾಂಗೀರ್‌ ಪುರಿಯಲ್ಲಿ ಹನುಮ ಜಯಂತಿ ಶೋಭಾ ಯಾತ್ರೆಯ ಮೇಲೆ ಕಲ್ಲುತೂರಾಟದ ನಂತರ ಮತ್ತೊಂದು ಆತಂಕಕಾರಿ ಬೆಳವಣಿಗೆ ಕಂಡು ಬಂದಿದೆ. ಜಹಾಂಗೀರ್ಪುರಿಯ ಜಾಮಾ ಮಸೀದಿಯು ಇನ್ನು ಮುಂದೆ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬರದಂತೆ ಮುಸ್ಲೀಮರಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಇದು ಮತ್ತೊಂದು ಗಲಭೆಯ ಮುನ್ಸೂಚನೆಯೇ ಎಂಬ ಅನುಮಾನ ಮೂಡಲು ಕಾರಣವಾಗಿದೆ.

ಗಲಭೆಯ ಒಂದು ವಾರಗಳ ನಂತರ ಜಾಮಾ ಮಸೀದಿಯ ಧರ್ಮಗುರು “ಇನ್ನು ಮುಂದೆ ಪ್ರಾರ್ಥನೆಗೆ ಬರುವಾಗ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬರಬೇಡಿ” ಎಂದು ಸೂಚಿಸಿದ್ದಾನೆ ಎನ್ನಲಾಗಿದೆ. ಮಕ್ಕಳು ಆಟ ಆಡುವಾಗ ಗೊತ್ತಿಲ್ಲದೇ ಇನ್ನೊಬ್ಬರ ಮೇಲೆ ಕಲ್ಲು ಎಸೆಯಬಾರದು ಎಂದು ಮುನ್ನೆಚ್ಚರಿಕೆಯಾಗಿ ಈ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಮಸೀದಿಯಿಂದ ಹೊರಬಿದ್ದಿರುವ ಈ ಆಂತರಿಕ ಸಂದೇಶವು ಮತ್ತೊಂದು ಗಲಭೆಯ ಮುನ್ಸೂಚನೆಯೇ ಎಂಬ ಶಂಕೆ ಮೂಡಲು ಕಾರಣವಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅವರನ್ನು ಉದ್ದೇಶ ಪೂರ್ವಕವಾಗಿ ಮಸೀದಿಯಿಂದ ದೂರ ಇಡುತ್ತಿರುವುದು ಉಳಿದ ಹಿಂದೂ ನಿವಾಸಿಗಳಲ್ಲಿ ಭಯವನ್ನು ಹುಟ್ಟುಹಾಕಿದೆ.

ಎಪ್ರಿಲ್‌ 16 ರ ಗಲಭೆಯ ನಂತರ ಈ ಪ್ರದೇಶದಲ್ಲಿ ಸೂಕ್ಷ್ಮ ವಾತಾವರಣವಿದ್ದು ಗಲಭೆಯ ಉರಿ ಇನ್ನೂ ಹೊಗೆಯಾಡುತ್ತಿದೆ . ಹನುಮಜಯಂತಿಯಂದು ಮಸೀದಿಯ ಒಳಗಿನಿಂದ ಮತ್ತು ಹೊರಗೆ ಮುಸ್ಲಿಂ ಗಲಭೆಕೋರರು ಶೋಭಾಯಾತ್ರೆಯ ಮೇಲೆ ಕಲ್ಲು ತೂರಾಟ ಮಾಡಿದ್ದರು. ಗಲಭೆಯಲ್ಲಿ ಪೋಲೀಸ್‌ ಸಿಬ್ಬಂದಿ ಸೇರಿದಂತಯೆ ಹಲವರು ಗಾಯಗೊಂಡಿದ್ದರು ಎಂಬುದು ಗಮನಿಸಲೇ ಬೇಕಾದ ಅಂಶವಾಗಿದ್ದು ಜಹಾಂಗೀರ್ಪುರಿ ಬೂದಿಮುಚ್ಚಿದ ಕೆಂಡದಂತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!