ಕೋವಿಡ್ ಲಸಿಕೆಯಿಂದ ಅಡ್ಡಪರಿಣಾಮ ಇದೆಯಾ? ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ಲಸಿಕೆಯಿಂದ ಅಡ್ಡ ಪರಿಣಾಮಗಳಿವೆ ಎನ್ನುವ ವರದಿಯನ್ನು ಕೇಂದ್ರ ಸಚಿವಾಲಯ ತಳ್ಳಿಹಾಕಿದೆ. ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆರ್‌ಟಿಐ ವಿಚಾರಣೆಯಲ್ಲಿ ಕೋವಿಡ್ ಲಸಿಕೆಗಳ ಅಡ್ಡ ಪರಿಣಾಮಗಳ ಬಗ್ಗೆ ವರದಿ ಮಾಡಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಐಸಿಎಂ ಆರ್ ಮತ್ತು ಸಿಡಿಎಸ್‌ಸಿಒ ಅಧಿಕಾರಿಗಳು ವರದಿಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿಕೆ ನೀಡಿದೆ.

ಕೋವಿಡ್ ವ್ಯಾಕ್ಸಿನ್ ನಂತರ ನೋವು, ತಲೆನೋವು. ತಲೆತಿರುಗುವುದು, ವಾಂತಿ ಬಂದಂತೆ ಆಗುವುದು ಸಾಮಾನ್ಯ. ಇದು ಅಡ್ಡ ಪರಿಣಾಮ ಅಲ್ಲ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ. ಲಸಿಕೆಗಳು ರೋಗ ಬಾರದಂತೆ ತಡೆಗಟ್ಟುತ್ತವೆ, ಅಡ್ಡಪರಿಣಾಮ ಇಲ್ಲ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!