ಪ್ರತೀ ಎರಡು ಸೆಕೆಂಡ್‌ಗೆ ಒಂದು ಸಾವು: ವಿಶ್ವಕ್ಕೆ ಯಮದೂತರಾಗಿ ಕಾಡುತ್ತಿವೆಯಾ ಈ ಕಾಯಿಲೆಗಳು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನಲ್ಲಿ ಹೃದಯ‌ ಸಮಸ್ಯೆ, ಕ್ಯಾನ್ಸರ್, ಮಧುಮೇಹ ಹಾಗೂ ಉಸಿರಾಟದ‌ ಸಮಸ್ಯೆ ಪ್ರಕರಣ ಹೆಚ್ಚಳವಾಗುತ್ತಿದ್ದು, ಪ್ರತಿ ಎರಡು ಸೆಕೆಂಡಿಗೆ ಒಂದು ಸಾವು ದಾಖಲಾಗುತ್ತಿದೆ ಎಂಬ ಆಘಾತಕಾರಿ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಗೊಳಿಸಿದೆ.

ಸಾವನ್ನಪ್ಪುವವರಲ್ಲಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಎಂಬುದು ಇನ್ನಷ್ಟು ಆಘಾತಕಾರಿ ಅಂಶವಾಗಿದೆ. ಸಾವನ್ನಪ್ಪುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಇನ್ನು ಈ ಪ್ರತಿ ಹತ್ತು ಸಾವುಗಳ ಪೈಕಿ ಒಂಬತ್ತು ಮಂದಿ ಕಡಿಮೆ ಮತ್ತು ಮಧ್ಯಮ ಆದಾಯವಿರುವ ಮಂದಿಯಾಗಿದ್ದಾರೆ. ಸಾಮಾಜಿಕ, ಪರಿಸರ, ವಾಣಿಜ್ಯ ಮತ್ತು ಜೆನಿಟೆಕ್ ಮುಂತಾದ ಕಾರಣಗಳಿಂದಾಗಿ ಈ ಎಲ್ಲಾ ಸಾವುಗಳು ಸಂಭವಿಸುತ್ತಿವೆ ಎಂದು ಡಬ್ಲ್ಯೂಎಚ್‌ಓ ಹೇಳಿದೆ.

ಪ್ರತೀ ವರ್ಷ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ 17 ಮಿಲಿಯನ್ ಮಂದಿ ಎನ್‌ಸಿಡಿ (ಸಾಂಕ್ರಾಮಿಕವಲ್ಲದ ಕಾಯಿಲೆ)ಗೆ ಬಲಿಯಾಗುತ್ತಿದ್ದಾರೆ.‌ ಇವುಗಳಲ್ಲಿ‌ ಪಾರ್ಶ್ವವಾಯು, ಕ್ಯಾನ್ಸರ್, ಡಯಾಬಿಟಿಸ್, ದೀರ್ಘಾವಧಿ ಉಸಿರಾಟ ತೊಂದರೆಗಳು ಸಾವಿನಲ್ಲಿ ಸಿಂಹಪಾಲು ಹೊಂದಿವೆ.‌ ಪ್ರತೀ ವರ್ಷ ಆರು ಸಾವುಗಳ ಪೈಕಿ ಒಂದು ಸಾವು ಕ್ಯಾನ್ಸರ್‌ನಿಂದಾಗಿಯೇ ಸಂಭವಿಸುತ್ತಿದೆ ಎಂದು ಅದು ಆತಂಕ ವ್ಯಕ್ತಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!