ಭಾರತ – ಅಮೆರಿಕ ಜಂಟಿ ಸಹಯೋಗದಲ್ಲಿ ಅಭಿವೃದ್ಧಿಯಾಗಲಿದೆ ಡ್ರೋನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಗತ್ತು ಸದ್ದಿಲ್ಲದೇ ಮುಂದಿನ ತಲೆಮಾರಿನ ಯುದ್ಧಕ್ಕೆ ಸಜ್ಜಾಗುತ್ತಿದೆ. ವಿವಿಧ ದೇಶಗಳು ಮುಂದಿನ ತಲೆಮಾರಿನ ಯುದ್ಧೋಪಕರಣಗಳು, ಶಸ್ತ್ರಾಸ್ತ್ರಗಳು ಸೇರಿದಂತೆ ರಕ್ಷಣಾ ಸಾಮಗ್ರಿಗಳನ್ನು ಅಭಿವೃದ್ಧಿ ಪಡಿಸುತ್ತಿವೆ. ಭಾರತವೂ ಈ ನೆಲೆಯಲ್ಲಿಯೇ ಮುಂದುವರೆಯುತ್ತಿದ್ದು ಇದೀಗ ಅಮೆರಿಕದ ಸಹಯೋಗದೊಂದಿಗೆ ಹೊಸ ತಲೆಮಾರಿನ ಕಾವಲುಗಾರ ʼಡ್ರೋನ್‌ʼ ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ.

ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತವು ಜಂಟಿ ಸಹಯೋಗದೊಂದಿಗೆ ಡ್ರೋನ್‌ಗಳನ್ನು ಅಭಿವೃದ್ಧಿ ಮಾಡಲಿದೆ ಎಂದು ಪೆಂಟಗನ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ ಎಂದು ಮೂಲಗಳು ವರದಿ ಮಾಡಿವೆ. ಅಮೆರಿಕಾವು ಚೀನಾದೊಂದಿಗೆ ಸೆಣೆಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಭಾರತದೊಂದಿಗೆ ಹೆಚ್ಚಿನ ಸಹಕಾರ ಬಯಸಿದೆ ಎನ್ನಲಾಗುತ್ತಿದೆ.

ಭಾರತವು ಈ ವಿಮಾನಗಳನ್ನು ನಿರ್ಮಿಸಿ ತನ್ನ ಪ್ರದೇಶದ ಇತರ ದೇಶಗಳಿಗೆ ರಫ್ತು ಮಾಡಲಿದೆ ಎನ್ನಲಾಗಿದೆ.

ಭಾರತದ ಬಹುತೇಕ ಶಸ್ತ್ರಾಸ್ತ್ರಗಳು ರಷ್ಯಾದಿಂದ ನಿರ್ಮಾಣಗೊಂಡಿವೆ. ಈ ಹಿನ್ನೆಲೆಯಲ್ಲಿ ಭಾರತವು ಯುದ್ಧೋಪಕರಣಗಳ ವಿಷಯದಲ್ಲಿ ಆತ್ಮನಿರ್ಭರವಾಗಲು ಎದರುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಒಪ್ಪಂದವು ಹೆಚ್ಚು ಪರಿಣಾಮಕಾರಿಯಾಗಲಿದೆ.”ಪ್ರಾಯೋಗಿಕವಾಗಿ ಹೇಳುವುದಾದರೆ, ಭಾರತದ ಸ್ವಂತ ರಕ್ಷಣಾ ಆಧುನೀಕರಣದ ಗುರಿಗಳನ್ನು ಬೆಂಬಲಿಸುವ ಸಹ-ಉತ್ಪಾದನೆ ಮತ್ತು ಸಹ-ಅಭಿವೃದ್ಧಿ ಸಾಮರ್ಥ್ಯಗಳ ಕುರಿತು ನಾವು ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದೇವೆ” ಎಂದು ಇಂಡೋ-ಪೆಸಿಫಿಕ್ ಭದ್ರತಾ ವ್ಯವಹಾರಗಳ ರಕ್ಷಣಾ ಸಹಾಯಕ ಕಾರ್ಯದರ್ಶಿ ಎಲಿ ರಾಟ್ನರ್ ಹೇಳಿದ್ದಾರೆ.

ಅಲ್ಲದೇ ಇದರಿಂದಾಗಿ ಭಾರತವು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಸೇರಿದಂತೆ ಪ್ರದೇಶದಾದ್ಯಂತ ಇತರ ಪಾಲುದಾರರಿಗೆ ಕೈಗೆಟುಕುವ ಬೆಲೆಯಲ್ಲಿ ಡ್ರೋನ್‌ ರಫ್ತು ಮಾಡಲು ಅನುಕೂಲವಾಗಲಿದೆ. ವಿಮಾನದಿಂದ ಉಡಾವಣೆಯಾಗಬಲ್ಲ ಹಾಗೂ ಡ್ರೋನ್‌ ನಿರೋಧಕ ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ರಾಟ್ನರ್ ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!