ನಿಜವಾಯಿತಾ ಬಲ್ಗೇರಿಯಾದ ಬಾಬಾ ವಂಗಾ ನುಡಿದ ಆ ಎರಡು ಭವಿಷ್ಯ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಲ್ಗೇರಿಯಾದ ಬಾಬಾ ವಂಗಾ ಭವಿಷ್ಯವಾಣಿಗಳು ಸದಾ ಚರ್ಚೆಯಲ್ಲಿರುತ್ತವೆ. ಈವರೆಗೆ ಅವರು ನುಡಿದ ಭವಿಷ್ಯದಲ್ಲಿ ಅನೇಕ ನಿಜ ಎಂದು ಸಾಬೀತಾಗಿವೆ. ಅದೇ ರೀತಿ ಈ ವರ್ಷ ಬಾಬಾ ವಂಗಾ ಅವರ ನುಡಿದಿದ್ದ ಆರು ಭವಿಷ್ಯಗಳ ಪೈಕಿ 2 ಭವಿಷ್ಯ ವಾಣಿಗಳು ನಿಜವಾಗಿದ್ದು, ಉಳಿದವೂ ಕೂಡ ನಿಜವಾಗುತ್ತೇನೋ ಅನ್ನೋ ಆತಂಕ ಜನರಲ್ಲಿದೆ.

ಬಾಬಾ ವಂಗಾ 2022 ಕ್ಕೆ ಏಷ್ಯಾದ ಕೆಲವು ದೇಶಗಳು ಮತ್ತು ಆಸ್ಟ್ರೇಲಿಯಾದಲ್ಲಿ ಪ್ರವಾಹ ಆಗಲಿದೆ ಎಂದು ಮುನ್ಸೂಚನೆ ನೀಡಿದ್ದರು. ಅದರಂತೆ ಆಸ್ಟ್ರೇಲಿಯಾದಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ಸಾವಿರಾರು ಜನ ಸಾವನ್ನಪ್ಪಿದ್ದರು.

ಇನ್ನು ಕೆಲವು ನಗರಗಳಲ್ಲಿ ನೀರಿನ ಕೊರತೆ ಇರಲಿದೆ ಎಂದು ಹೇಳಿದ್ದರು. ಅದರಂತೆ ಪೋರ್ಚುಗಲ್, ಇಟಲಿಯಲ್ಲೂ ನೀರಿನ ಕೊರತೆ ಉಂಟಾಗಿತ್ತು. ಇದು ಕೂಡ ನಿಜವಾಗಿದೆ.

ಇನ್ನು ನಾಲ್ಕು ಭವಿಷ್ಯ ನುಡಿದಿದ್ದಾರೆ ಬಾಬಾ ವಂಗಾ.ಅಂದರೆ, ಕೊರೋನಾ ವೈರಸ್ ನಂತರ ಹೊಸ ಮಾರಣಾಂತಿಕ ವೈರಸ್ ಬರಲಿದೆಯಂತೆ. ಇದು ಸೈಬೀರಿಯಾದಿಂದ ಪ್ರಾರಂಭವಾಗಬಹುದು ಎಂದು ಹೇಳಿದ್ದಾರೆ. ಇನ್ನು ಕ್ಷಾಮದಂತಹ ಪರಿಸ್ಥಿತಿ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಹಾಗೆಯೇ ಭಾರತದಲ್ಲಿ ತಾಪಮಾನ ಕುಸಿತ ಆಗಲಿದೆಯಂತೆ. ಇದರಿಂದ ಮಿಡತೆಗಳ ದಾಳಿ ಹೆಚ್ಚಲಿದೆಯಂತೆ. ಬೆಳೆ ನಾಶವೂ ಆಗಲಿದೆಯಂತೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!