ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಟಿ ರವಿ ಮೇಲಿನ ಹಲ್ಲೆ ಯತ್ನಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಜೆಡಿಎಸ್ ಪಕ್ಷ ಕಿಡಿ ಕಾರಿದೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಡಿ ಕೆ ಶಿವಕುಮಾರ್, ಹೆಣ್ಣು ಮಗಳ ಬಗ್ಗೆ 12 ಬಾರಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದು ಡಿಸಿಎಂ ಆರೋಪ ಮಾಡಿದ್ದರು. ಇದು ಚಿಕ್ಕಮಗಳೂರು ಸಂಸ್ಕೃತಿನಾ? ಭಾರತದ ಸಂಸ್ಕೃತಿನಾ? ಬಿಜೆಪಿ ಸಂಸ್ಕೃತಿನಾ? ಎಂದು ಪ್ರಶ್ನೆ ಮಾಡಿದ್ದರು.
ಇದಕ್ಕೆ ತಿರುಗೇಟು ನೀಡಿದ ಜೆಡಿಎಸ್, ಡಿ ಕೆ ಶಿವಕುಮಾರ್ ಮಾತನಾಡಿದ ವಿಡಿಯೋ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ನೀವು ಜವಾಬ್ದಾರಿ ಉಪಮುಖ್ಯಮಂತ್ರಿಯೋ? ರೌಡಿ ಗ್ಯಾಂಗ್‌ನ ಮುಖ್ಯಸ್ಥನೋ? ಕೊಲೆಗೆ ಪರೋಕ್ಷವಾಗಿ ಕುಮ್ಮಕ್ಕು ಕೊಡುತ್ತಿರುವ ನೀನು ಯಾವ ಸೀಮೆ ಉಪಮುಖ್ಯಮಂತ್ರಿ. ರೌಡಿ ಕೊತ್ವಾಲ್‌ನ ಶಿಷ್ಯ ಡಿ ಕೆ ಶಿವಕುಮಾರ್ ಬೆಳೆದು ಬಂದಿರುವ ಕರಾಳ ಇತಿಹಾಸವೇ ಇಂತಹದ್ದು. ಕೊಲೆಗೆ ಯತ್ನ ಸ್ವಾಭಾವಿಕ ಎಂದು ಹೇಳಿಕೆ ನೀಡಿರುವ ನೀನು ರಾಜಕಾರಣಿಯೋ ? ರೌಡಿಯೋ? ಎಂದು ಖಾರವಾಗಿ ಪ್ರಶ್ನೆ ಮಾಡಿದೆ.
ಪೊಲೀಸರು ನಡತೆನೂ ಸರಿ ಇಲ್ಲ. ನಾನು ಯಾವುದರಲ್ಲೂ ಇಂಟರ್ಫಿಯರ್ ಆಗಿಲ್ಲ. ಯಾರೋ ಒಬ್ರು ಇಬ್ರೋ ಮೀಟ್ ಮಾಡಬೇಕಿತ್ತು. ಅದನ್ನು ಬಿಟ್ಟು ಬಿಜೆಪಿ ಮೀಟಿಂಗ್ ಮಾಡಿದ್ದಾರೆ. ಇದು ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಇರೋದು ಸಜಹವಾಗಿಯೇ ಕಾಂಗ್ರೆಸ್ ಕಾರ್ಯಕರ್ತರು ಬಂದಿದಾರೆ. ಈ ಕೊಳಕಬಾಯಿ ಹೊಸದಲ್ಲ ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲ ಖಾನ್ ಎಂಬ ಪದ ಬಳಸಿದ್ದಾರೆ. ಇವರೊಬ್ಬರದ್ದೇ ಹರಕಲು ಬಾಯಿ ಎಂದು ಡಿ ಕೆ ಶಿವಕುಮಾರ್ ಕಿಡಿ ಕಾರಿದ್ದರು.