September 14, 2026
Monday, September 14, 2026
spot_img

ಹೊಸ ಮನೆ ಕಟ್ತಿದ್ದೀರಾ? ಅದೇ ಹಳೇ ಡಿಸೈನ್‌ ಬೇಡ ಸ್ಟೈಲಿಷ್‌ ರೈಲಿಂಗ್ಸ್‌ ಹೀಗೆ ಹಾಕಿಸಿ

ಹೊಸ ಮನೆ ಕಟ್ಟಿಸುವವರಿಗೆ ನೂರಾರು ಚಿಂತೆ ಮಾಮೂಲಿ. ಮನೆಯ ಅಂದವನ್ನು ಹೆಚ್ಚುಮಾಡೋದಕ್ಕೆ ನಾವು ತೆಗೆದುಕೊಳ್ಳುವ ಸಣ್ಣ ನಿರ್ಧಾರಗಳು ಸಹಾಯ ಮಾಡುತ್ತವೆ. ಮನೆ ಡ್ಯುಪ್ಲೆಕ್ಸ್‌ ಆಗಿದ್ದರೆ ಮನೆಯೊಳಗೆ ಯಾವ ರೀತಿ ಮೆಟ್ಟಿಲುಗಳ ರೈಲಿಂಗ್ಸ್‌ ಹಾಕಿಸುತ್ತೀರಿ ಅನ್ನೋದು ಮುಖ್ಯವಾಗುತ್ತದೆ. ಇನ್ನು ಮನೆಯ ಹೊರಕ್ಕೆ ಹತ್ತುವ ಮೆಟ್ಟಿಲುಗಳಲ್ಲಿಯೂ ಈ ಡಿಸೈನ್‌ ರೈಲಿಂಗ್ಸ್‌ ಬಳಕೆ ಮಾಡಿ. ಯಾವೆಲ್ಲಾ ಡಿಸೈನ್ಸ್‌? ಇಲ್ಲಿದೆ ಡೀಟೇಲ್ಸ್‌..

ಡ್ಯುಪ್ಲೆಕ್ಸ್‌ ಮನೆ ನಿಮ್ಮದಾಗಿದ್ದರೆ ಮಾಮೂಲಿ ವರ್ಟಿಕಲ್‌ ರೈಲಿಂಗ್ಸ್‌ ಬದಲಾಗಿ ಈ ರೀತಿ ಕರ್ವ್‌ ಇರುವ ರೈಲಿಂಗ್ಸ್‌ ಬಳಕೆ ಮಾಡಿ ಇದು ನಿಮ್ಮ ಮನೆಯ ಅಂದವನ್ನೇ ಬದಲಾಯಿಸುತ್ತದೆ. ಎಲ್ಲರೂ ಈ ಡಿಸೈನ್‌ ಎಲ್ಲಿಂದ ಹುಡುಕಿದ್ರಿ ಎಂದು ಕೇಳುವಂತೆ ಆಗುತ್ತದೆ.

ನಮಗೆ ವರ್ಟಿಕಲ್‌ ಲೈನ್ಸ್‌ ಇಷ್ಟ ಅನ್ನೋದಾದ್ರೆ ಅರ್ಧದ ಬದಲು ಪೂರ್ಣ ಮೆಟ್ಟಿಲಿಗೆ ರೈಲಿಂಗ್ಸ್‌ ಬಳಕೆ ಮಾಡಿ. ಇದು ಪ್ರೈವೆಸಿ ರೀತಿಯ ಫೀಲಿಂಗ್‌ ನೀಡುತ್ತದೆ. ನೋಡೋದಕ್ಕೂ ಕ್ಲಾಸಿ ಆಗು ಕಾಣಿಸುತ್ತದೆ.

ನೀವು ಸಂಗೀತಪ್ರಿಯರಾದ್ರೆ ಈ ರೀತಿ ಮ್ಯೂಸಿಕ್‌ನ ಹಾಗೆ ಕಾಣಿಸುವ ರೈಲಿಂಗ್ಸ್‌ ಬಳಸಿ. ಇದರಿಂದ ನಿಮ್ಮ ಮನೆಗೆ ಒಂದು ಥೀಮ್‌ ಬರುತ್ತದೆ. ಅಂದವಾಗಿಯೂ ಕಾಣಿಸುತ್ತದೆ.

ಬಜೆಟ್‌ ಎಷ್ಟಾದ್ರೂ ಪರವಾಗಿಲ್ಲ ನಮಗೆ ಪ್ರೀಮಿಯಂ ಲುಕ್‌ ಬೇಕು ಎನ್ನುವವರು ಮರವನ್ನು ಬಳಕೆ ಮಾಡಿ. ಮರದ ರೈಲಿಂಗ್ಸ್‌ ಮೇಲೆ ಕೆತ್ತನೆ ಆಗಿದ್ರೆ ನಿಮ್ಮ ಮನೆಗೆ ಅದು ಡ್ರಡಿಷನಲ್‌ ಟಚ್‌ ನೀಡುತ್ತದೆ. ಇದಕ್ಕೆ ತಕ್ಕ ಇಂಟೀರಿಯರ್ಸ್‌ ಕೂಡ ಮಾಡಿಸಬಹುದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !