Saturday, December 9, 2023

Latest Posts

ನಕಲಿ ವಿಡಿಯೋ ಸೃಷ್ಟಿಕರ್ತರೇ ಕಾಂಗ್ರೆಸ್ಸಿನ ಮಹಾನಾಯಕರಾಗಿದ್ದಾರೆ: ಯತ್ನಾಳ

ಹೊಸದಿಗಂತ ವರದಿ ವಿಜಯಪುರ:

ನಕಲಿ ವಿಡಿಯೋ ಸೃಷ್ಟಿಕರ್ತರೇ ಕಾಂಗ್ರೆಸ್ಸಿನ ಮಹಾನಾಯಕರಾಗಿದ್ದಾರೆ. ನಕಲಿ ಸಿಡಿ ಮಾಡುವ ಕಂಪನಿ ಕರ್ನಾಟಕ ಸರ್ಕಾರದಲ್ಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದರು.

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್, ಆಪರೇಷನ್ ಕಮಲ ಆರೋಪ ವಿಚಾರಕ್ಕೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯಾವ ಶಾಸಕರಿಗೆ ಆಫರ್ ಕೊಟ್ಟಿದ್ದಾರೆ? ವಿಡಿಯೋ, ಆಡಿಯೋ ಇದೆ ಅಂತಾರೆ, ಬಹಿರಂಗಪಡಸಲಿ ಎಂದು ಸವಾಲ್ ಹಾಕಿದರು.

ರಮೇಶ್ ಜಾರಕಿಹೊಳಿ ಹೇಳಿದಂತೆ ನಕಲಿ ಸಿಡಿ ವಿಡಿಯೋ ಆಡಿಯೋ ಮಾಡುವ ಶಕ್ತಿ ಕಾಂಗ್ರೆಸ್ಸಿನ ಬಂಡೆಗಲ್ಲಿಗಿದೆ. ಬಂಡೆಗಲ್ಲು ಮಾಡಿದರೆ ಬಹಿರಂಗಪಡಿಸಲಿ. ತನಿಖೆ ಸಂಸ್ಥೆಗೆ ಕೊಡಲಿ, ತನಿಖೆ ಆಗಲಿ, ಬಹಿರಂಗಪಡಿಸಲಿ. ಸುಮ್ಮನೆ ಬ್ಲ್ಯಾಕ್‌ಮೇಲ್ ಮಾಡತ್ತಿದ್ದಾರೆ, ಇದರಲ್ಲಿ ಬಿಜೆಪಿಯವರು ಯಾರು ಇಲ್ಲ. ತಾವೇ ಜಗಳವಾಡಿ ಹಾಳಾಗುವಾಗ ನಮ್ಮದೇನು ಕೆಲಸ ಇದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!