ಪ್ರೆಗ್ನೆನ್ಸಿ ಸಿಂಪಲ್ ವಿಷಯ ಅಲ್ವೇ ಅಲ್ಲ, ಪತ್ನಿ ತಾಯ್ತನದ ಬಗ್ಗೆ ಎಷ್ಟು ತಿಳಿದಿರಬೇಕೋ ಹಾಗೆ ಪತಿ ಕೂಡ ತನ್ನ ಗರ್ಭಿಣಿ ಪತ್ನಿ ಬಗ್ಗೆಯೂ ಹೆಚ್ಚು ಮಾಹಿತಿ ತಿಳಿದಿರಬೇಕು. ಬೇರೆ ಯಾವುದೇ ಸಮಯದಲ್ಲಿ ಏನೇ ಮಾಡಿದರೂ ಹುಡುಗಿಯರು ಮರೆತುಬಿಡುತ್ತಾರೆ, ಆದರೆ ಗರ್ಭಿಣಿಯಾಗಿದ್ದಾಗ ಪತಿ ಹೇಗೆ ನೋಡಿಕೊಂಡಿದ್ದಾರೆ ಎನ್ನುವುದು ಸದಾಕಾಲ ನೆನಪಿರುತ್ತದೆ. ತಂದೆಯಾಗುವ ಮುನ್ನ ಈ ಅಂಶಗಳನ್ನು ಗಮನದಲ್ಲಿಡಿ..
- ಈ ಹಿಂದೆ ಇಡ್ಲಿ ಅಂದ್ರೆ ಅವಳಿಗೆ ತುಂಬಾ ಇಷ್ಟ ಇರಬಹುದು, ಈಗ ಅದೇ ಇಡ್ಲಿಯಿಂದ ವಾಕರಿಕೆ ಬರಬಹುದು, ಆಹಾರದ ಟೇಸ್ಟ್ ಬದಲಾಗುತ್ತದೆ.
- ಹೆಂಡತಿ ಮದುವೆಯಾದಾಗ ಇದ್ದಷ್ಟು ಸುಂದರವಾಗಿಯೇ ಇರುವುದಿಲ್ಲ, ನೈಸರ್ಗಿಕವಾಗಿ ಆಕೆ ದಪ್ಪ ಆಗುತ್ತಾಳೆ, ತದನಂತರ ತೂಕ ಇಳಿಸಲು ವರ್ಷಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ.
- ಆಕೆಯ ಮೂಡ್‌ಸ್ವಿಂಗ್ಸ್ ನಿಮಿಷಕ್ಕೊಮ್ಮೆ ಬದಲಾದರೂ ಆಶ್ಚರ್ಯವಿಲ್ಲ, ಅವಳ ಹಾರ್ಮೋನ್ಸ್ ಅವಳನ್ನು ಮೂಡಿ ಮಾಡುತ್ತದೆ, ನೀವೇ ಸಂಭಾಳಿಸಬೇಕು.
- ಪ್ರೆಗ್ನೆಂಟ್ ಸೆಕ್ಸ್ ಬಗ್ಗೆ ಹೆಚ್ಚು ಮಾಹಿತಿ ಪಡೆಯಿರಿ, ವೈದ್ಯರನ್ನು ಕೇಳಿ, ಆಕೆಯ ಇಷ್ಟಕಷ್ಟ ಇಲ್ಲಿ ತುಂಬಾ ಮುಖ್ಯ.
- ಮಾರ್ನಿಂಗ್ ಸಿಕ್‌ನೆಸ್ ಬರೀ ಮಾರ್ನಿಂಗ್‌ಗೆ ಮಾತ್ರ ಇರೋದಿಲ್ಲ. ಯಾವಾಗಲೂ ಸಿಕ್ ಎನಿಸುವ ದಿನಗಳು ಇರುತ್ತವೆ.
- ಆಕೆ ತನ್ನ ದೇಹದ ಸೌಂದರ್ಯ, ತೂಕದ ಬಗ್ಗೆ ಸದಾ ಯೋಸಿಸುತ್ತಾಳೆ, ನೀವು ಅದರ ಬಗ್ಗೆ ಪಾಸಿಟಿವ್ ಮಾತುಗಳನ್ನಾಡಿ.
- ಈ ಎಲ್ಲದರ ಮಧ್ಯೆ ತಂದೆಯಾಗುವ ಜವಾಬ್ದಾರಿಗಳ ಬಗ್ಗೆ ಯೋಚಿಸಿ.
- ಸುಮ್ಮನೆ ಸಿಕ್ಕದ್ದನ್ನು ತಿನ್ನುತ್ತಾಳೆ ಎಂದು ಬೈಬೇಡಿ, ಆಕೆಯ ಕ್ರೇವಿಂಗ್ಸ್ ನಿಜ!
- ಏನಿಲ್ಲಾ ಎಂದರೂ 8-10 ಕೆ.ಜಿ ತೂಕ ಹೆಚ್ಚಾಗುವುದು ಖಚಿತ, ಇದರ ಬಗ್ಗೆ ಆಕೆ ಚಿಂತೆ ಮಾಡುವುದು ಬೇಡ.
- ರಾತ್ರಿ ಪದೇ ಪದೆ ಮೂತ್ರ ವಿಸರ್ಜನೆಗೆ ಹೋಗೋದು, ನಿದ್ದೆ ಬಾರದೇ ಇರುವುದು ಸಾಮಾನ್ಯ.
- ಕೂತರೂ, ನಿಂತರೂ ಅವರಿಗೆ ಸದಾ ನೀವು ಬೇಕು, ನಿಮ್ಮ ಸಾಥ್ ಬೇಕು, ಪ್ರೀತಿ, ಮುದ್ದು ಹೆಚ್ಚು ಬೇಕು ನೆನಪಿರಲಿ.
- ಆಕೆಗೆ ಕೈ, ಕಾಲು, ಬೆನ್ನು, ಸೊಂಟ ಎಲ್ಲ ನೋವು ಬರಬಹುದು, ಎಲ್ಲವೂ ಸಾಮಾನ್ಯ ನೀವು ಚೆನ್ನಾಗಿ ನೋಡಿಕೊಳ್ಳಿ.
- ಎಲ್ಲ ಭಾವನೆಗಳು ಉತ್ತುಂಗದಲ್ಲಿರುತ್ತವೆ, ಖುಷಿ, ದುಃಖ, ಸಿಟ್ಟು ಎಲ್ಲವೂ ಹೆಚ್ಚೇ!
- ಸದಾ ಚಿಂತೆ ಮಾಡುತ್ತಾಳೆ, ಮನೆಯ ಬಗ್ಗೆ, ನಿಮ್ಮ ಬಗ್ಗೆ, ಹುಟ್ಟುವ ಮಗುವಿನ ಬಗ್ಗೆ ಸದಾ ಭಯ, ಆತಂಕ ಇರುತ್ತದೆ.
ಎಲ್ಲ ಹೆಣ್ಣುಮಕ್ಕಳಿಗೂ ಗರ್ಭಿಣಿಯಾದಾಗ ಸಾಕಷ್ಟು ವಿಚಿತ್ರ ಎನಿಸುವ ಅನುಭವಗಳು ಆಗುತ್ತವೆ, ಆಕೆಗೆ ನಿಮ್ಮಂತೆ ಎಲ್ಲವೂ ಹೊಸತು, ನಿಮ್ಮ ಪ್ರೀತಿ, ಆರೈಕೆಯಿಂದ ಮಾತ್ರ ಆಕೆಯನ್ನು ಖುಷಿಯಾಗಿಟ್ಟುಕೊಳ್ಳೋದಕ್ಕೆ ಸಾಧ್ಯ, ಆಕೆಯೇ ಮಗು ಎನ್ನುವಂತೆ ಕಾಪಾಡಿಕೊಳ್ಳಿ, ನಿಮ್ಮ ಮಗುವು ಖುಷಿಯಾಗಿರುತ್ತದೆ. ಮಗು ಹುಟ್ಟಿದ ಕೆಲ ತಿಂಗಳುಗಳು ಮಗುವಿಗೆ ತಾಯಿಯ ಭಾವನೆಯೇ ತನ್ನ ಭಾವನೆಯಾಗಿರುತ್ತದೆ. ಅಮ್ಮ ನಕ್ಕರೆ ಸಮಾಧಾನ, ಅಮ್ಮ ಅತ್ತರೆ ಅಳು ಹೀಗೆ.. ನಿಮ್ಮ ಪತ್ನಿಯನ್ನು ಈ ಸಮಯದಲ್ಲಿ ಚೆನ್ನಾಗಿ ಆರೈಕೆ ಮಾಡಿ, ಆಕೆ ಜೀವನವಿಡೀ ಇದನ್ನು ನೆನಪಿಡುತ್ತಾಳೆ!