BOLLYWOOD| ಸ್ವಂತ ಉದ್ಯಮ ಆರಂಭಿಸಿದ ಆರ್ಯನ್: ಪುತ್ರನ ಡೈರೆಕ್ಷನ್‌ನಲ್ಲಿ ಶಾರುಖ್ ಜಾಹೀರಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರ್ಯನ್ ಖಾನ್ ತಂದೆಯಂತೆ ಹೀರೋ ಆಗಬೇಕು ಮತ್ತು ನಟನೆಗೆ ಪ್ರವೇಶಿಸಬೇಕು ಎಂದು ಶಾರುಖ್‌ ಅಭಿಮಾನಿಗಳು ಬಯಸಿದ್ದರು. ಆದರೆ ಆರ್ಯನ್ ಖಾನ್ ಅವರು ನಿರ್ದೇಶಕರಾಗಿ ಸಿನಿಮಾ ಮಾಡುವುದಾಗಿ ಕೆಲ ದಿನಗಳ ಹಿಂದೆ ಘೋಷಿಸಿದ್ದರು. ಶಾರುಖ್ ಪುತ್ರ ಆರ್ಯನ್ ಖಾನ್ ಶೀಘ್ರದಲ್ಲೇ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಆರ್ಯನ್ ಒಂದು ಕಡೆ ನಿರ್ದೇಶನ, ಇನ್ನೊಂದು ಕಡೆ ವ್ಯಾಪಾರದತ್ತಲೂ ಗಮನ ಹರಿಸಿದರು. ಅವರು dyavol.X ಬ್ರ್ಯಾಂಡ್‌ನೊಂದಿಗೆ ಐಷಾರಾಮಿ ಬಟ್ಟೆ ವ್ಯಾಪಾರವನ್ನು ಪ್ರಾರಂಭಿಸುತ್ತಿದ್ದಾರೆ. ಐಷಾರಾಮಿ ಸ್ಟ್ರೀಟ್ ವೇರ್ ಹಿನ್ನಲೆಯಲ್ಲಿ ಆರ್ಯನ್ ತಮ್ಮ ಬಟ್ಟೆ ಬ್ರಾಂಡ್ ಅನ್ನು ಪ್ರಾರಂಭಿಸುತ್ತಿದ್ದಾರೆ. ಶೀಘ್ರದಲ್ಲೇ ಇವು ಮಾರುಕಟ್ಟೆಗೆ ಬರಲಿವೆ. ಇದಕ್ಕಾಗಿ ಆರ್ಯನ್ ವಿಶೇಷ ಜಾಹೀರಾತನ್ನು ಚಿತ್ರೀಕರಿಸಿದ್ದಾರೆ. ಈ ಜಾಹೀರಾತಿನಲ್ಲಿ ಶಾರುಖ್ ಖಾನ್ ನಟಿಸಿ ತಮ್ಮ ಮಗನ ನಿರ್ದೇಶನಕ್ಕೆ ಸೇರ್ಪಡೆಯಾದರು. ಇತ್ತೀಚೆಗೆ ಈ ಜಾಹೀರಾತಿನ ಚಿತ್ರೀಕರಣ ಪೂರ್ಣಗೊಂಡಿದೆ. ಶೀಘ್ರದಲ್ಲೇ ಈ ಜಾಹೀರಾತನ್ನು ಬಿಡುಗಡೆ ಮಾಡುತ್ತೇವೆ ಎಂದು ಆರ್ಯನ್ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಶಾರುಖ್ ಪುತ್ರಿ ಸುಹಾನಾ ಖಾನ್ ಖ್ಯಾತ ಬ್ಯೂಟಿ ಬ್ರ್ಯಾಂಡ್ ನ ರಾಯಭಾರಿಯಾಗಿ ಆಯ್ಕೆಯಾಗಿದ್ದರು. ಈಗ ಅವರ ಮಗ ನಿರ್ದೇಶನ ಮಾಡುತ್ತಿದ್ದಾರೆ. ಮಕ್ಕಳ ಬಗ್ಗೆ ಶಾರುಖ್ ತುಂಬಾ ಖುಷಿಯಾಗಿದ್ದಾರೆ. ಶಾರುಖ್ ಕೂಡ ಇತ್ತೀಚೆಗೆ ಸುಹಾನಾ ಅವರನ್ನು ಅಭಿನಂದಿಸಿ ಪೋಸ್ಟ್ ಹಾಕಿದ್ದರು. ಅಲ್ಲದೇ ಶಾರುಖ್ ಅಭಿಮಾನಿಗಳು ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!