September 14, 2026
Monday, September 14, 2026
spot_img

ವಾತಾವರಣದ ಚೇಂಜಸ್‌ನಿಂದಾಗಿ ಅನಾರೋಗ್ಯ ಕಾಡ್ತಾ ಇದೆಯಾ? ನಿತ್ಯವೂ ಈ ಜೀರಿಗೆ ಕಷಾಯ ಸೇವಿಸಿ

ಜೀರ್ಣಕ್ರಿಯೆಯನ್ನು ಸುಧಾರಿಸಲು, ದೇಹವನ್ನು ತಂಪಾಗಿಡಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಲು ಜೀರಿಗೆ ಕಷಾಯವನ್ನು ಕುಡಿಯುವುದು ಉತ್ತಮವಾಗಿದೆ. ಇದೊಂದು ಆಯುರ್ವೇದ ಪಾನೀಯವಾಗಿದ್ದು, ಗ್ಯಾಸ್ಟ್ರಿಕ್‌, ಹೊಟ್ಟೆ ಉಬ್ಬರ, ತೂಕ ಇಳಿಕೆಗೆ ಇದು ಮನೆಮದ್ದಾಗಿದೆ. ಇದನ್ನು ಹೇಗೆ ಮಾಡೋದು?

ಸಾಮಾಗ್ರಿಗಳು
ಜೀರಿಗೆ
ಬೆಲ್ಲ
ಕಾಳುಮೆಣಸು
ಲವಂಗ, ಏಲಕ್ಕಿ
ಹಾಲು
ನೀರು

ಮಾಡುವ ವಿಧಾನ
ಒಂದು ಲೋಟ ನೀರಿಗೆ ಎರಡು ಸ್ಪೂನ್‌ ಜೀರಿಗೆ, ಒಂದು ಸ್ಪೂನ್‌ ಬೆಲ್ಲ, ಏಲಕ್ಕಿ ಹಾಗೂ ಲವಂಗ ಹಾಕಿ ಕುದಿಸಿ
ನೀರಿನ ಬಣ್ಣ ಬದಲಾಗುವವರೆಗೂ ಸಣ್ಣ ಉರಿಯಲ್ಲಿ ಕುದಿಸಬೇಕು. ಆನಂತರ ಇದಕ್ಕೆ ಕಾಲು ಲೋಟ ಅಥವಾ ನಾಲ್ಕೈದು ಸ್ಪೂನ್‌ ಹಾಲು ಹಾಕಿದ್ರೆ ಸಾಕು. ಕಷಾಯ ತಯಾರಾಗುತ್ತದೆ. ಹಾಲು ಇಷ್ಟವಿಲ್ಲ ಎನ್ನುವವರು ಹಾಗೆಯೇ ನೀರಿನಂತೆ ಕಷಾಯ ಕುಡಿಯಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !