Tuesday, March 21, 2023

Latest Posts

ಬೂದಿ ಎಂದು ಗೇಲಿ ಮಾಡುತ್ತೀರಾ, ನೋಡಿ ಅಮೆಜಾನ್‌ನಲ್ಲಿ 1 ಕೆಜಿಗೆ 1800 ರೂಪಾಯಿ ಎಂದ ಬಾಬಾ ರಾಮದೇವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾನಾ ಹೇಳಿಕೆ ಮೂಲಕ ಸುದ್ದಿಯಲ್ಲಿರುವ ಯೋಗ ಗುರು ಬಾಬಾ ರಾಮ್‌ದೇವ್‌ ಇದೀಗ ಎರಡು ದಿನಗಳ ಹಿಂದೆ ಮಾಡಿರುವ ಟ್ವೀಟ್‌ ಸಖತ್‌ ವೈರಲ್‌ ಆಗಿದೆ.

ತಮ್ಮಪತಂಜಲಿ ಕಂಪನಿಯ ಮೂಲಕ ಸ್ವದೇಶಿ ದಿನಬಳಕೆ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಅವರು, ಭಾರತೀಯರು ಮೊದಲು ಪೇಸ್ಟ್‌ಗಳ ಬದಲು ಮಸಿಯನ್ನು ಬಳಸಿ ಹಲ್ಲುಜ್ಜುತ್ತಿದ್ದರು. ವಿದೇಶಿ ಕಂಪನಿಗಳು, ಇದರಿಂದ ಅನಾರೋಗ್ಯ ಉಂಟಾಗುತ್ತದೆ ಎಂದು ನಂಬಿಸಿ ಜನರ ದಾರಿ ತಪ್ಪಿಸಿದರು. ಈಗ ಪ್ರತಿಷ್ಠಿತ ಕಂಪನಿಗಳೇ ಚಾರ್ಕೋಲ್‌ (ಮಸಿ) ಪೇಸ್ಟ್‌ಗಳನ್ನು ಮುಕ್ತವಾಗಿ ಮಾರಾಟ ಮಾಡುತ್ತಿದೆ.

ಈಗ ಅದೇ ರೀತಿಯ ಟ್ವಿಟರ್‌​ ಮೂಲಕ ಅಮೇಝಾನ್​ನಲ್ಲಿ ಮಾರಾಟಕ್ಕಿರುವ ಬೂದಿಯ ಪ್ಯಾಕೆಟ್ ಸುತ್ತ ಚರ್ಚೆ ಆರಂಭಿಸಿದ್ದಾರೆ. ಪಾತ್ರೆ ತೊಳೆಯಲು ಉಪಯೋಗಿಸುವ ಈ ಬೂದಿಯನ್ನು ಅವೈಜ್ಞಾನಿಕ ಎಂದು ಗೇಲಿ ಮಾಡುತ್ತಿರುವವರೆಲ್ಲ ಒಮ್ಮೆ ಅಮೇಝಾನ್​ಗೆ ಹೋಗಿ ನೋಡಿ ಎನ್ನುತ್ತಿದ್ದಾರೆ.

‘ನಮ್ಮ ಪೂರ್ವಜರು ಪಾತ್ರೆ ತೊಳೆಯಲು ಬಳಸುತ್ತಿದ್ದ ಒಲೆಯ ಬೂದಿಯನ್ನು ಮೊದಲು ಅವೈಜ್ಞಾನಿಕ ಎಂದು ಗೇಲಿ ಮಾಡುತ್ತಿದ್ದರು. ಕೆಮಿಕಲ್ ಡಿಶ್ ವಾಶ್ ಬಳಸುವುದನ್ನು ರೂಢಿ ಮಾಡಿಸಿದ್ದರು. ಇದು ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಕಾರಣವಾಗಿದೆ. ಇಂದು ಅಮೆಜಾನ್ ನಂಥ ದೊಡ್ಡ ಕಂಪನಿ ಅದೇ ಒಲೆ ಬೂದಿಯನ್ನು ಕೆಜಿಗೆ 1800 ರೂಪಾಯಿಯ ಮಾರಾಟ ಮಾಡುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ನಮ್ಮ ಆಚಾರ, ಪದ್ದತಿ ಅವೈಜ್ಞಾನಿಕ ಎಂದವರೆಲ್ಲ ಮೊದಲ ಅಮೆಜಾನ್‌ಗೆ ಹೋಗಿ ನೋಡಿ ಎಂದು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ರಾಮ್‌ದೇವ್‌ ಮಾಡಿರುವ ಈ ಟ್ವೀಟ್‌ಅನ್ನು ಈವರೆಗೂ 1.1 ಮಿಲಿಯನ್‌ ಜನರು ವೀಕ್ಷಿಸಿದ್ದಾರೆ. ಅಂದಾಜು 20 ಸಾವಿರಕ್ಕೂ ಹೆಚ್ಚಿನ ಜನರು ಮೆಚ್ಚುಗೆ ಸೂಚಿಸಿದ್ದಾರೆ. 6241 ಮಂದಿ ರೀಟ್ವೀಟ್‌ ಮಾಡಿದ್ದರೆ, 147 ಮಂದಿ ಕೋಟ್‌ ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!