Thursday, March 30, 2023

Latest Posts

2017ರ ಪ್ರಕರಣ: ಕೋರ್ಟ್ ಗೆ ಹಾಜರಾಗದೆ ಶಾಸಕ ಹಾರ್ದಿಕ್ ಪಟೇಲ್ ಬಂಧನಕ್ಕೆ ವಾರಂಟ್ ಜಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2017ರ ಪ್ರಕರಣವೊಂದರಲ್ಲಿ ಗುಜರಾತ್ ಬಿಜೆಪಿಶಾಸಕ ಹಾರ್ದಿಕ್ ಪಟೇಲ್ ವಿಚಾರಣೆಗೆ ಹಾಜರಾಗದ ಕಾರಣ ನ್ಯಾಯಾಲಯವು ಬಂಧನ ವಾರಂಟ್ ಜಾರಿಗೊಳಿಸಿದೆ.

2017ರ ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಜಿಲ್ಲೆಯ ಹಳ್ಳಿಯೊಂದರಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಪಟೇಲ್ ರಾಜಕೀಯ ಭಾಷಣ ಮಾಡಿದ್ದರು.

ಆದ್ರೆ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದ ಪಟೇಲ್ ವಿರುದ್ಧ ಧ್ರಂಗಾಧ್ರದಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಡಿಡಿ ಶಾ ಅವರು ಬಂಧನ ವಾರಂಟ್ ಹೊರಡಿಸಿದ್ದಾರೆ.

ಫೆಬ್ರವರಿ 2 ರಂದು ತನ್ನ ಆದೇಶದ ಮೂಲಕ, ನ್ಯಾಯಾಲಯವು ಪಟೇಲ್ ಅನ್ನು ಬಂಧಿಸಿ ನ್ಯಾಯಾಲಯದ ಮುಂದೆ ತಪ್ಪದೇ ಹಾಜರುಪಡಿಸುವಂತೆ ಸುರೇಂದ್ರನಗರ ಜಿಲ್ಲೆಯ ಧ್ರಂಗಾಧ್ರ ತಾಲೂಕು ಪೊಲೀಸ್ ಠಾಣಾಧಿಕಾರಿಗೆ ಸೂಚಿಸಿತು. ಫೆಬ್ರವರಿ 11 ರಂದು ಪೊಲೀಸ್ ಠಾಣೆಗೆ ಆದೇಶ ಬಂದಿದೆ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಎಫ್‌ಐಆರ್‌ ಪ್ರಕಾರ, 2017ರ ನವೆಂಬರ್‌ 26ರಂದು ವಿಧಾನಸಭೆ ಚುನಾವಣೆಗೆ ಮುನ್ನ ಪಟೇಲ್ ಮತ್ತು ಸಹ-ಆರೋಪಿ ಕೌಶಿಕ್ ಪಟೇಲ್ ಅವರು ಗ್ರಾಮದಲ್ಲಿ ಸಭೆ ನಡೆಸಲು ಅನುಮತಿ ಕೋರಿದ್ದರು. ಆದರೆ ಮಾಡಿದ ಭಾಷಣದಲ್ಲಿ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಹೊರಡಿಸಿದ ಅಧಿಸೂಚನೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!