ನಂದಿ ಬೆಟ್ಟದಲ್ಲಿ ನ್ಯೂ ಇಯರ್‌ ಪ್ಲ್ಯಾನ್‌ ಮಾಡ್ತಿದ್ದೀರಾ? ನಿಮ್ಮ ಐಡಿಯಾ ವರ್ಕೌಟ್‌ ಆಗೋದಿಲ್ಲ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೊಸ ವರ್ಷ ಬಂತೆಂದರೆ ನಂದಿಬೆಟ್ಟದಲ್ಲಿ ಸಿಕ್ಕಾಪಟ್ಟೆ ರಶ್‌. ಪ್ರಕೃತಿ ಮಡಿಲಲ್ಲಿ ಕುಡಿದು, ಕುಣಿದು, ಕುಪ್ಪಳಿಸಿ ಹೊಸ ವರ್ಷ 2025ನ್ನು ಆಚರಿಸೋಣ ಅಂತ, ಕೆಲವು ಪಾರ್ಟಿ ಪ್ರಿಯರು ಅಂದುಕೊಂಡಿದ್ದಾರೆ. ಆದರೆ, ಈಗಲೇ ನಿಮ್ಮ ಪ್ಲಾನ್​ ಅನ್ನು ಬದಲಾಯಿಸಿಕೊಳ್ಳಿ, ಏಕೆಂದರೆ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿದೆ.

ನಂದಿಗಿರಿಧಾಮ ಕಾಣಸಿಗುವ ಬೆಳ್ಳಿ ಮೋಡ, ಇಬ್ಬನಿ, ಸುತ್ತಲೂ ಎತ್ತ ನೋಡಿದರೂ ಮುತ್ತಿಕ್ಕುವ ಮಂಜು, ಇಂಥ ಪ್ರಕೃತಿ ಸೊಬಗಿನಲ್ಲಿ ಕುಳಿತು ಹೊಸ ವರ್ಷ 2025ನ್ನು ಸ್ವಾಗತಿಸೋಣ ಅಂತ ಕೆಲವು ಪಾರ್ಟಿ ಪ್ರಿಯರು ಅಂದುಕೊಂಡಿದ್ದರು. ಆದರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪಾರ್ಟಿ ಪ್ರಿಯರ ಕನಸು ಭಗ್ನ ಮಾಡಿದೆ.

ಡಿಸೆಂಬರ್ 31ಸಂಜೆ 6 ಗಂಟೆಯಿಂದ 2025 ಜನವರಿ1ರಂದು ಬೆಳಿಗ್ಗೆ ರಾತ್ರಿ 11 ಗಂಟೆವರೆಗೂ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದು, ಜೊತೆಗೆ ಅತಿಥಿ ಗೃಹಗಳಿಗೆ ಪ್ರವೇಶ ಕೂಡ ನಿರ್ಬಂಧಿಸಿದೆ. ಇದರಿಂದ ಪ್ರವಾಸೋದ್ಯಮ ಇಲಾಖೆಗೂ ನಿರ್ಬಂಧದ ಬಿಸಿ ಮುಟ್ಟಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!