LIFE STYLE| ನೀವು ಸಿಂಗಲ್ಲಾ….ಈ ವರ್ಷದ ಪ್ರೇಮಿಗಳ ದಿನಾಚರಣೆಯನ್ನು ಹೀಗೆ ಆಚರಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರೇಮಿಗಳ ದಿನವನ್ನು ಜೋಡಿಯಾಗೇ ಆಚರಿಸಬೇಕಂತೇನೂ ಇಲ್ಲ. ಒಂಟಿಯಾಗಿದ್ದವರೂ ಈ ದಿನವನ್ನು ನೀವು ಎಂಜಾಯ್‌ ಮಾಡಬಹುದು. ಅದು ಹೇಗೆ ಎಂಬುದನ್ನು ಮನವರಿಕೆ ಆದರೆ ಸಾಕು ಎಲ್ಲರಿಗಿಂತ ಖುಷಿ ನಿಮ್ಮ ಬದುಕಿನಲ್ಲೂ ಸಿಗುತ್ತದೆ. ಈ ದಿನ ನೀವು ಖುಷಿಯಾಗಿರಲಿ ಈ ಒಂದು ಸಲಹೆಗಳನ್ನು ಫಾಲೋ ಮಾಡಿ.

ಸೋಲೋ ಟ್ರಿಪ್:  ನಮ್ಮ ಸಂತೋಷವನ್ನು ನಾವೇ ಹುಡುಕಬೇಕು. ಇನ್ನೊಬ್ಬರಿಗಾಗಿ ಕಾಯದೆ ಸೋಲೋ ಟ್ರಿಪ್‌ ಎಂಜಾಯ್‌ ಮಾಡಿ. ನಿಮಗಿಷ್ಟವಾದ ಜಾಗಕ್ಕೆ ಒಬ್ಬರೇ ಪ್ರಯಾಣಿಸಿ ಕಾರು/ಬೈಕು ಯಾವುದಾದರೂ ಸರಿಯೇ ಏಕಾಂಕಿ ಪ್ರಯಾಣ ದೀರ್ಘಾವಧಿಯ ಸಂತೋಷವನ್ನು ನೀಡುತ್ತದೆ.

ಪುಸ್ತಕ ಓದಿ: ಪುಸ್ತಕಕ್ಕಿಂತ ಒಳ್ಳೆಯ ಸಂಗಾತಿ ಮತ್ತೊಬ್ಬ ಇರಲಾರ. ಕಥೆ, ಕಾದಂಬರಿ, ಇತಿಹಾಸ, ಸಾಹಿತ್ಯ, ಹೀಗೆ ಯಾವುದಾದರೊಂದನ್ನು ಆಯ್ಕೆ ಮಾಡಿಕೊಂಡು ಪುಸ್ತಕ ಪ್ರೇಮಿಯಾದರೆ ಬೇರ್ಯಾವುದೇ ನೆನಪು ಬಾರದು.

ನಿಮ್ಮನ್ನು ನೀವು ಕಂಡುಕೊಳ್ಳಿ: ಅಂದವಾಗಿ ಡ್ರೆಸ್ ಮಾಡಿಕೊಳ್ಳಿ ನಿಮಗಿಷ್ಟವಾದ ರೆಸ್ಟೋರೆಂಟ್‌ಗೆ ಹೋಗಿ ಮತ್ತು ನಿಮ್ಮ ನೆಚ್ಚಿನ ಆಹಾರವನ್ನು ಸೇವಿಸಿ. ತ್ವಚೆಯ ಆರೈಕೆ ಮಾಡಿಕೊಳ್ಳಿ. ಪಾಪ್‌ಕಾರ್ನ್‌ನೊಂದಿಗೆ ನಿಮ್ಮ ಮೆಚ್ಚಿನ ಚಲನಚಿತ್ರವನ್ನು ನೋಡುತ್ತಾ ನಿಮ್ಮ ಬಗ್ಗೆ ನೀವು ಯೋಚಿಸಿ ದಿನ ಕಳೆಯಿರಿ.

ಕುಟುಂಬದವರೊಂದಿಗೆ ಕಾಲ ಕಳೆಯಿರಿ: ಸಂಗಾತಿ, ಬಾಯ್‌ಫ್ರೆಂಡ್‌ ಇವರ್ಯಾರು ಇಲ್ಲ ಅಂತ ಬೇಜಾರಾಗಬೇಕಿಲ್ಲ. ನಿಮ್ಮ ಕುಟುಂಬವೇ ನಿಮಗೆಲ್ಲ ಎಂದು ತಿಳಿದು ಅವರಿಗಾಗಿ ಒಂದು ಪಾರ್ಟಿ ಆಯೋಜಿಸಿ ರುಚಿ ರುಚಿಯಾದ ಆಹಾರ ತಯಾರಿಸಿ ಎಲ್ಲರೊಂದಿಗೆ ಸವಿಯಿರಿ. ಈ ವೇಳೆ ಹಾಡು, ಕುಣಿತ, ಆಟ ಒಂದಷ್ಟು ಭಾವನೆಗಳ ಬಗೆಗೂ ಹರಟೆ ಹೊಡೆಯಿರಿ.

ಪಿಕ್ನಿಕ್: ಮನಸೆಳೆಯುವ ಉದ್ಯಾನವನಗಳಲ್ಲಿ ಒಮ್ಮೆ ಸುತ್ತು ಬನ್ನಿ. ನಿಮಗೆ ಬೇಜಾರಾದರೆ ನಿಮ್ಮ ಮನೆಯ ಸಾಕು ಪ್ರಾಣಿ ಶ್ವಾನವನ್ನೂ ಜೊತೆಗೆ ಕರೆದೊಯ್ಯಿರಿ ಅದ್ಕಕಿಂತ ಉತ್ತಮ ಕಂಪಾನಿಯನ್‌ ಬೇಕಾ?

ಧಾರಾವಾಹಿ, ವೆಬ್‌ ಸಿರೀಸ್‌ ವೀಕ್ಷಿಸಿ: ಯಾವುದರ ಗೊಡೆವೆಯೇ ಇಲ್ಲದೆ ನಿಮಗಿಷ್ಟವಾದ ವೆಬ್‌ ಸರಣಿ, ಧಾರವಾಹಿ ನೋಡಿ ಮನಸು ಉಲ್ಲಾಸಗೊಳಿಸಿ. ನಿಮಗಿಷ್ವಾದ ತಿಂಡಿಯನ್ನು ಸವಿದು ದಿನವನ್ನು ಕಳೆಯಿರಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!