ಚಳಿಗಾಲವಾದ ಕಾರಣ ಸಾಮಾನ್ಯವಾಗಿ ಎಲ್ಲರಿಗೂ ಶೀತ, ಕೆಮ್ಮು ಆಗಾಗ ಬಂದು ಹೋಗುತ್ತಲೇ ಇರುತ್ತದೆ. ಮನೆಯಲ್ಲೇ ಇದಕ್ಕೆ ಪರಿಹಾರ ಇದೆ, ಈ ಮನೆಮದ್ದುಗಳನ್ನು ಟ್ರೈ ಮಾಡಿ…
ನೀರಿಗೆ 7 ರಿಂದ 8 ತುಳಸಿ ಎಲೆಗಳು, ಒಂದು ಸಣ್ಣ ತುಂಡು ಶುಂಠಿ, ಕೆಲವು ಬೆಳ್ಳುಳ್ಳಿ ತುಂಡುಗಳು, ಜೀರಿಗೆ, ಅರಿಶಿನ, ಮೆಂತ್ಯ ತಲಾ ಒಂದು ಟೀಸ್ಪೂನ್ ಹಾಗೂ 4ರಿಂದ 5 ಕಾಳುಮೆಣಸು ಸೇರಿಸಿ ಕುದಿಸಿ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಈ ಮಿಶ್ರಣವನ್ನು ಕುಡಿಯುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಇದರ ಜೊತೆಗೆ ಸ್ವಲ್ಪ ಅರಿಶಿನ, ಕಾಳು ಮೆಣಸು ಮತ್ತು ಜೇನುತುಪ್ಪದ ಮಿಶ್ರಣವನ್ನು ಸೇವಿಸಬಹುದು.
ಪ್ರತಿದಿನ ಕನಿಷ್ಠ 2ರಿಂದ 3 ಬಾರಿ ತುಳಸಿ ನೀರು ಅಥವಾ ಚಹಾ ಕುಡಿಯಬೇಕು. ಇಲ್ಲದಿದ್ದರೆ ತುಳಸಿ ಎಲೆಗಳನ್ನು ಅಗಿಯುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
ಆಮ್ಲಾ, ಅನಾನಸ್, ನಿಂಬೆ, ಕಿವಿ ಮುಂತಾದ ಹಣ್ಣುಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ಕೆಮ್ಮು ಮತ್ತು ಶೀತ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ವಿವರಿಸಲಾಗಿದೆ.
ಜೀರ್ಣಕ್ರಿಯೆಯನ್ನು ಸುಧಾರಿಸಲು ಬೆಚ್ಚಗಿನ ನೀರನ್ನು ಕುಡಿಯಲು ಆಯುರ್ವೇದ ತಜ್ಞರು ತಿಳಿಸುತ್ತಾರೆ. ಗಂಟಲಿನ ಸಮಸ್ಯೆ ಇರುವ ಜನರು ಜೇನುತುಪ್ಪ ಸೇವಿಸುವುದರಿಂದ ಬೇಗನೇ ಪರಿಹಾರ ಲಭಿಸುತ್ತದೆ.
ಕೆಮ್ಮು ಮತ್ತು ಶೀತ ಸಮಸ್ಯೆಯನ್ನು ಪರಿಹರಿಸಲು ನಾವು ದಿನನಿತ್ಯ ಸೇವಿಸುವ ಸಾಮಾನ್ಯ ಚಹಾ ಮತ್ತು ಕಾಫಿಯ ಬದಲಿಗೆ ಶುಂಠಿ ಮತ್ತು ನಿಂಬೆ ಚಹಾವನ್ನು ಕುಡಿಯಲು ಸೂಚಿಸಲಾಗುತ್ತದೆ.
ಬೆಚ್ಚಗಿನ ಹಾಲಿಗೆ ಸ್ವಲ್ಪ ಅರಿಶಿನ ಬೆರೆಸಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಅರಿಶಿನ ಹಾಗೂ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.