ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಲ್ಮಾನ್ ಖಾನ್ ಜೊತೆ ರಶ್ಮಿಕಾ ನಟಿಸುತ್ತಿರುವ ಸಿಖಂದರ್ ಸಿನಿಮಾ ಶೂಟಿಂಗ್ ವೇಳೆ ನಟಿ ಕಾಲಿಗೆ ಗಾಯವಾಗಿದೆ. ಈ ಕಾರಣದಿಂದ ಕಾಲಿನ ಮೇಲೆ ಭಾರ ಹಾಕದಂತೆ ವೈದ್ಯರು ಸೂಚನೆ ನೀಡಿದ್ದಾರೆ.
ಸದ್ಯ ರಶ್ಮಿಕಾ ಅಭಿನಯದ ಛಾವ ಸಿನಿಮಾ ಟ್ರೇಲರ್ ಇಂದು ರಿಲೀಸ್ ಆಗಲಿದೆ. ಹಾಗಾಗಿ ಈವೆಂಟ್ ಮಿಸ್ ಮಾಡಲಾಗದ ಕಾರಣ ರಶ್ಮಿಕಾ ಕುಂಟುತ್ತಲೇ ಏರ್‌ಪೋರ್ಟ್‌ಗೆ ಬಂದಿದ್ದಾರೆ. ಕಾರಿನಿಂದ ಇಳಿದು ಕುಂಟುತ್ತಲೇ ವ್ಹೀಲ್ಚೇರ್ ಮೇಲೆ ಕುಳಿತಿದ್ದಾರೆ. ಈ ರೀತಿ ಫೋಟೊಗಳು ವೈರಲ್ ಆಗಬಾರದು ಎಂದು ರಶ್ಮಿಕಾ ಕ್ಯಾಪ್ ಧರಿಸಿದ್ದು, ಫೋನ್ ನೋಡುತ್ತಾ ಬ್ಯುಸಿಯಾಗಿರುವಂತೆ ಕಂಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
View this post on Instagram