ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ಹೊತ್ತಿನಲ್ಲಿ ಪ್ರಮಾಣವಚನ ಕಾರ್ಯಕ್ರಮ ಆರಂಭವಾಗಲಿದೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದು, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇಂದು ಎಲ್ಲರ ಕಣ್ಣು ಜೋಡೆತ್ತುಗಳ ಮೇಲೆ ಇರಲಿದೆ, ಹೀಗಿರುವಾಗ ಸ್ವಲ್ಪ ಹೊತ್ತಿನ ಹಿಂದಷ್ಟೇ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ಕಾಣಿಸಿದ್ದಾರೆ.
ಮುಖದಲ್ಲಿ ಸುಸ್ತು ಅನಾರೋಗ್ಯ ಹಾಗೂ ಕಳೆಯಿಲ್ಲದಂತೆ ಕಾಣುತ್ತಿದ್ದು, ಯಾಕ್ ಸರ್ ಸುಸ್ತಾಗಿದೀರಾ ಎನ್ನುವ ಪ್ರರ್ಶನೆ ಎದುರಾಗಿದೆ. ಇದಕ್ಕೆ ಡಿಕೆಶಿ ನಕ್ಕಿದ್ದು, ಹೌದು, ಸ್ವಲ್ಪ ಅರಾಮಿಲ್ಲ, ಸುಮಾರು ದಿನಗಳಿಂದ ನಿದ್ದೆ ಇಲ್ಲ, ಮನೆಯ ಊಟ ಇಲ್ಲ ಜೊತೆಗೆ ಪ್ರಯಾಣದ ಸುಸ್ತೂ ಇದೆ, ಮನೆಗೆ ಹೋಗಿ ಫ್ರೆಶ್ ಅಪ್ ಆಗಿ ಬರ‍್ತೇನೆ ಎಂದು ಹೇಳಿದ್ದಾರೆ.