USEFULL TIPS | ಹಸಿಮೆಣಸು ಕತ್ತರಿಸಿ ಕೈ ಉರಿಯಾಗುತ್ತಿದೆಯಾ? ಹೀಗೆ ಮಾಡಿನೋಡಿ!

ಸಸ್ಯಾಹಾರವಿರಲಿ, ಮಾಂಸಾಹಾರವಿರಲಿ ಅಲ್ಲಿ ಹಸಿಮೆಣಸಿಗೊಂದು ವಿಶೇಷ ಸ್ಥಾನಮಾನ ಇದ್ದೇ ಇದೆ. ಯಾವ ಅಡುಗೆಯಾದರೂ ಮೆಣಸಿನಕಾಯಿಯಿಲ್ಲದೆ ಅದು ಅಪೂರ್ಣ. ಆದರೆ ಮೆಣಸು ಕತ್ತರಿಸುವುದೇನೋ ಸರಿ. ಕೈ ಉರಿಯುತ್ತಲ್ಲಾ… ಈ ಸಮಸ್ಯೆ ಬಹುಮಂದಿಯನ್ನು ಕಾಡುತ್ತಿರುತ್ತದೆ. ಎಷ್ಟು ಬಾರಿ ಕೈ ತೊಳೆದರೂ ಕೈ ಉರಿ ಕಡಿಮೆಯಾಗುವುದೇ ಇಲ್ಲ . ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ಉಪಯುಕ್ತ ಟಿಪ್ಸ್‌ ಇಲ್ಲಿದೆ ನೋಡಿ.

  • ಮೆಣಸಿನಕಾಯಿ ಕತ್ತರಿಸಿದ ನಂತರ ಕೈ ಹೊಗೆಯುವಂತಹ ರೀತಿಯಲ್ಲಿ ಉರಿಹತ್ತಿಕೊಳ್ಳಲಾರಂಭಿಸುತ್ತದೆ. ಈ ಉರಿಯನ್ನು ಶಮನಗೊಳಿಸಲು ಅಲೋವೇರ ಜೆಲ್‌ ಬಳಸಬಹುದು. ಸ್ವಲ್ಪ ಅಲೊವೇರ ಜೆಲ್‌ ಅನ್ನು ಕೈಗೆ ಹಾಕಿ ಉರಿ ಇರುವ ಕಡೆಗಳಲ್ಲಿ ನಿಧಾನವಾಗಿ ಮಸಾಜ್ ಮಾಡಿ. ಕೆಲವೇ ನಿಮಿಷಗಳಲ್ಲಿ ಉರಿ ವಾಸಿಯಾಗುತ್ತದೆ.
  • ಅಲೋವೇರ ಗಿಡದಲ್ಲಿರುವ ಪಲ್ಪ್‌ ಅಂಶವನ್ನು ಅಂಗೈಗೆ ಹಾಕಿ ಸರಿಯಾಗಿ ಹಿಚುಕಿಕೊಂಡು ಮಸಾಜ್‌ ಮಾಡಿದರೂ ತಕ್ಷಣಕ್ಕೆ ಉರಿ ಶಮನವಾಗುತ್ತದೆ.
  • ಮನೆಯ ಅಡುಗೆಮನೆಯಲ್ಲಿರುವ ಗೋಧಿಹುಡಿಯನ್ನು ಉರಿಯುವ ಪ್ರದೇಶಕ್ಕೆ ಹಾಕಿದರೆ ಉರಿ ಶಮನವಾಗುವುದು.
  • ಪುದೀನಾ ಎಣ್ಣೆ ನಿಮ್ಮ ಬಳಿಯಿದ್ದರೆ ಉರಿ ಇರುವ ಜಾಗಕ್ಕೆ ಸವರಿದಲ್ಲಿ ಉರಿಶಮನವಾಗುತ್ತದೆ.
  • ಫ್ರಿಜ್ಡ್‌ಒಳಗಿದ್ದ ತಣ್ಣನೆಯ ಮೊಸರನ್ನು ಸಹ ನೀವು ಉರಿಕಡಿಮೆಮಾಡಲು ಬಳಸಬಹುದಾಗಿದೆ.
  • ಮೆಣಸಿನಕಾಯಿ ಕತ್ತರಿಸುವ ಮೊದಲು ಕೈಗೆ ಎಣ್ಣೆ ಸವರಿಕೊಂಡಿದ್ದಲ್ಲಿ ಉರಿಯಾಗುವುದಿಲ್ಲ. ಕೈಗವಚ ಧರಸಿ ಮೆಣಸಿನಕಾಯಿ ಕತ್ತರಿಸಿದರೂ ಉರಿಯಾಗದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!