Sunday, June 4, 2023

Latest Posts

ಸಿಎಂ ಪಟ್ಟಕ್ಕೆ ಯಾರು ಸೂಕ್ತ? ಹೇಗಿದೆ ಹೈ ಲೆಕ್ಕಾಚಾರ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬಹುತೇಕ ರಾಜ್ಯದ ಮುಖ್ಯಮಂತ್ರಿ ಯಾರು ಎನ್ನುವ ಘೋಷಣೆಯಾಗಲಿದೆ. ಈ ಹಿಂದೆ ಸಾಕಷ್ಟು ಲೆಕ್ಕಾಚಾರ ನಡೆದಿದೆ. ರಾಜ್ಯದ ಘಟಾನುಘಟಿ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಿಎಂ ರೇಸ್‌ನಲ್ಲಿ ಇದ್ದಾರೆ.

ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗುತ್ತೇವೆ ಎಂದು ಇಬ್ಬರೂ ಹೇಳಿದ್ದರೂ, ಕಂಡೀಷನ್ಸ್ ಅಪ್ಲೇ ಅನ್ನೋ ರೀತಿ ನಡೆದುಕೊಳ್ಳುತ್ತಿದ್ದಾರೆ. ಡಿಕೆಶಿ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದು, ಆದರೆ ಸಿಎಂ ಇಲ್ಲವೇ ಶಾಸಕನಷ್ಟೇ ಬೇರೆ ಯಾವ ಜವಾಬ್ದಾರಿಯೂ ಬೇಡ ಎಂದಿದ್ದಾರೆ. ಇತ್ತ ಸಿದ್ದರಾಮಯ್ಯ ಮಾತ್ರ ತಾವೇ ಸಿಎಂ ಎಂದು ನೆಮ್ಮದಿಯಲ್ಲಿ ಇದ್ದಾರೆ.

ಹೈಕಮಾಂಡ್‌ನಲ್ಲಿ ರಾಹುಲ್ ಗಾಂಧಿ. ಕೆ.ಸಿ. ವೇಣುಗೋಪಾಲ್ ಸಿದ್ದರಾಮಯ್ಯ ಪರವಾಗಿ ಇದ್ದಾರೆ ಇನ್ನು ಪ್ರಿಯಾಂಕಾ ವಾದ್ರಾ ಡಿ.ಕೆ. ಶಿವಕುಮಾರ್ ಪರವಾಗಿ ಇದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ಸುರ್ಜೇವಾಲಾ ತಟಸ್ಥರಾಗಿದ್ದು, ಪಕ್ಷಕ್ಕೆ ಯಾವುದು ಉತ್ತಮವೋ ಆ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ.

ಖರ್ಗೆ ಇಬ್ಬರನ್ನೂ ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಡಿಕೆಶಿ ಆದರೆ ಸಿಎಂ ಇಲ್ಲವೇ ಶಾಸಕ ಎಂದಿದ್ದಾರೆ. ಇನ್ನು ಸಿದ್ದರಾಮಯ್ಯ ಆದರೆ ಪೂರ್ಣಾವಧಿ ಸಿಎಂ ಆಗುವ, ಅಧಿಕಾರ ಹಂಚಿಕೆಗೆ ಒಪ್ಪಿಗೆ ಇಲ್ಲ. ಸಿಎಂ ಘೋಷಣೆ ಮುನ್ನವೇ ಎಲ್ಲ ವಿಷಯಗಳನ್ನು ಕ್ಲಿಯರ್ ಮಾಡಬೇಕು ಎಂದು ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ.ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದವರಿಗೆ ಸಿಎಂ ಪಟ್ಟ ಕೊಡುವುದು ಸಂಪ್ರದಾಯ, ಹಾಗೆಯೇ ನಡೆಯಬೇಕೆಂದು ಡಿಕೆಶಿ ಮನವಿ ಮಾಡಿದ್ದಾರೆ.

ಇಬ್ಬರೂ ಹೈಕಮಾಂಡ್ ಮುಂದೆ ತಮ್ಮ ವಾದ ಮಂಡಿಸಿದ್ದು, ಹೈ ಕಮಾಂಡ್‌ಗೆ ನಿರ್ಧಾರ ಕೈಗೊಳ್ಳುವುದು ತುಸು ಕಷ್ಟವೇ ಆಗಲಿದೆ. ಇಂದು ಶಿಮ್ಲಾದಿಂದ ಸೋನಿಯಾ ಗಾಂಧಿ ದೆಹಲಿಗೆ ಆಗಮಿಸಿದ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!