ಹವಾಮಾನ ಬದಲಾದಂತೆ ನಮ್ಮ ದೇಹದಲ್ಲೂ ಹಲವು ಬದಲಾವಣೆಗಳಾಗುತ್ತವೆ. ವಿಶೇಷವಾಗಿ ಮಳೆಗಾಲ ಮತ್ತು ಚಳಿಗಾಲದ ತಂಪಾದ ಗಾಳಿ ಹಾಗೂ ವಾತಾವರಣದಲ್ಲಿರುವ ಒಣ ಹವೆಯು ನಮ್ಮ ಚರ್ಮದ ಮೇಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಈ ಋತುಗಳಲ್ಲಿ ವಯಸ್ಸಿನ ಭೇದವಿಲ್ಲದೆ ಬಹುತೇಕ ಎಲ್ಲರನ್ನೂ ಕಾಡುವ ಒಂದು ಪ್ರಮುಖ ಸಮಸ್ಯೆ ಎಂದರೆ ಅದು ತುಟಿಗಳು ಒಣಗುವುದು ಮತ್ತು ಒಡೆಯುವುದು.
ಕೆಲವರಿಗಂತೂ ತುಟಿಗಳು ವಿಪರೀತ ಒಡೆದು ರಕ್ತ ಬರುವುದು ಮತ್ತು ಉರಿ ಉಂಟಾಗುವುದು ಸಾಮಾನ್ಯ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಲಿಪ್ ಬಾಮ್‌ಗಳು ತಾತ್ಕಾಲಿಕ ಪರಿಹಾರ ನೀಡಿದರೂ, ದೀರ್ಘಕಾಲದಲ್ಲಿ ತುಟಿಗಳನ್ನು ಕಪ್ಪಾಗಿಸುತ್ತವೆ. ಹಾಗಿದ್ದರೆ, ಈ ಸೀಸನ್‌ನಲ್ಲಿ ನಿಮ್ಮ ತುಟಿಗಳನ್ನು ನೈಸರ್ಗಿಕವಾಗಿ ಸಾಫ್ಟ್ ಆಗಿ ಇಟ್ಟುಕೊಳ್ಳುವುದು ಇಲ್ಲಿದೆ ಸರಳ ಮನೆಮದ್ದು.
ಶುದ್ಧ ಹಸುವಿನ ತುಪ್ಪ ಅಥವಾ ಬೆಣ್ಣೆ
ರಾತ್ರಿ ಮಲಗುವ ಮುನ್ನ ಮತ್ತು ಹಗಲಿನಲ್ಲಿ 2-3 ಬಾರಿ ಹಸುವಿನ ತುಪ್ಪ ಅಥವಾ ಬೆಣ್ಣೆಯನ್ನು ತುಟಿಗಳಿಗೆ ಹಚ್ಚಿ ಲಘುವಾಗಿ ಮಸಾಜ್ ಮಾಡಿದರೆ ಒಣಗಿದ ಚರ್ಮವನ್ನು ಆಳದಿಂದ ಪೋಷಿಸಿ, ತುಟಿಗಳು ಒಡೆಯದಂತೆ ತಡೆಯುತ್ತದೆ.
ಜೇನುತುಪ್ಪ ಮತ್ತು ಗ್ಲಿಸರಿನ್ ಮಿಶ್ರಣ
ಅರ್ಧ ಚಮಚ ಜೇನುತುಪ್ಪಕ್ಕೆ 2 ಹನಿ ಗ್ಲಿಸರಿನ್ ಸೇರಿಸಿ ಮಿಕ್ಸ್ ಮಾಡಿ ತುಟಿಗಳಿಗೆ ಹಚ್ಚಿ 15 ನಿಮಿಷ ಬಿಟ್ಟು, ತಣ್ಣಗಿನ ನೀರಿನಿಂದ ತೊಳೆದುಕೊಂಡರೆ. ತುಟಿಗಳ ಮೇಲಿರುವ ಸಣ್ಣ ಸಣ್ಣ ಗಾಯಗಳನ್ನು ಬೇಗನೆ ಗುಣಪಡಿಸುತ್ತದೆ.
ಶುದ್ಧ ತೆಂಗಿನ ಎಣ್ಣೆ
ದಿನದಲ್ಲಿ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಶುದ್ಧ ತೆಂಗಿನ ಎಣ್ಣೆಯನ್ನು ತುಟಿಗಳಿಗೆ ಹಚ್ಚುತ್ತಿದ್ದರೆ ತುಟಿಗಳು ಕಪ್ಪಾಗದಂತೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಇದನ್ನೂ ಓದಿ:
ಹಾಲಿನ ಕೆನೆ ಮತ್ತು ಅರಿಶಿನ
ಹಾಲಿನ ಕೆನೆಗೆ ಒಂದು ಚಿಟಿಕೆ ಅರಿಶಿನ ಪುಡಿ ಸೇರಿಸಿ ಮಿಕ್ಸ್ ಮಾಡಿ ತುಟಿಗಳಿಗೆ ಹಚ್ಚಿ. 10 ನಿಮಿಷಗಳ ನಂತರ ಮೃದುವಾಗಿ ತಿಕ್ಕಿ ಸ್ವಚ್ಛಗೊಳಿಸಿದರೆ. ತುಟಿಗಳ ಮೇಲಿರುವ ಕಪ್ಪು ಕಲೆಗಳನ್ನು ನಿವಾರಿಸುತ್ತದೆ.
ಅಲೋವೆರಾ ಜೆಲ್
ಅಲೋವೆರಾ ಜೆಲ್‌ನ್ನು ದಿನಕ್ಕೆ ಎರಡು ಬಾರಿ ಹಚ್ಚಿದರೆ ತುಟಿ ಉರಿಯನ್ನು ತಕ್ಷಣವೇ ಕಡಿಮೆ ಮಾಡಿ, ತಂಪಾದ ಮತ್ತು ಆರಾಮದಾಯಕ ಅನುಭವ ನೀಡುತ್ತವೆ.



